Headlines

ಹಸಿರುಮಕ್ಕಿ ಸೇತುವೆ ಇನ್ನೂ ಮೂರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ – ಶಾಸಕ ಬೇಳೂರು

ಹಸಿರುಮಕ್ಕಿ ಸೇತುವೆ ಇನ್ನೂ ಮೂರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ – ಶಾಸಕ ಬೇಳೂರು

ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ |

ನಿಟ್ಟೂರು : ಬಹುದಿನಗಳಿಂದ ಸ್ಥಳೀಯರ ನಿರೀಕ್ಷೆಯಲ್ಲಿದ್ದ ಹಸಿರುಮಕ್ಕಿ ಸೇತುವೆ ಕಾಮಗಾರಿ ಇನ್ನೇನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಗಳಿಂದ ಸೇತುವೆ ಉದ್ಘಾಟನೆ ನಡೆಯಲಿದೆ ಎಂದು ಸಾಗರ–ಹೊಸನಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.

ನಿಟ್ಟೂರು ಕಾಂಗ್ರೆಸ್ ಘಟಕದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಹಸಿರುಮಕ್ಕಿ ಸೇತುವೆ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ. ಮುಂದಿನ ಮೂರು ತಿಂಗಳೊಳಗೆ ಮುಖ್ಯಮಂತ್ರಿ ಅವರಿಂದ ಉದ್ಘಾಟನೆ ನಡೆಸಲು ಯೋಜನೆ ಮಾಡಲಾಗಿದೆ,” ಎಂದು ಸ್ಪಷ್ಟಪಡಿಸಿದರು.

ನಿಟ್ಟೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಒಟ್ಟು 9 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿನಿಂದ 6 ಕೋಟಿ ರೂ. ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು 3 ಕೋಟಿ ರೂ. ರಸ್ತೆ ಸುಧಾರಣೆಗೆ ಮೀಸಲಿರಿಸಲಾಗಿದೆ ಎಂದು ಅವರು ತಿಳಿಸಿದರು. ಜೊತೆಗೆ ನಿಟ್ಟೂರು ಪ್ರದೇಶದ ಹಲವು ದೇವಸ್ಥಾನಗಳ ಅಭಿವೃದ್ಧಿಗೂ ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ರೈತರ ಬೆಳೆ ವಿಮೆಯ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದ ಶಾಸಕರು, ಮುಂಬರುವ ಅಧಿವೇಶನದಲ್ಲಿಈ ವಿಚಾರಗಳನ್ನು ಪ್ರಸ್ತಾಪಿಸಲಾಗುವುದಾಗಿ ಹೇಳಿದರು. ಕಾರ್ಯಕರ್ತರನ್ನುದ್ದೇಶಿಸಿ “ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕು. ಜನರ ಸಮಸ್ಯೆಗಳಿಗೆ ನಾನು ಯಾವಾಗಲೂ ಲಭ್ಯ. ನನ್ನ ಮನೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿದೆ” ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ವಹಿಸಿದ್ದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಗೋಡಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಕಾರ್ಯದರ್ಶಿ ಚಂದಯ್ಯ ಜೈನ್, ಕೂಡ್ಲುಕೊಪ್ಪ ಸುರೇಶ್, ಗಣಪತಿ ಜಾಲ, ರವೀಂದ್ರ ಚೆನ್ನಪ್ಪ, ಮಂಜಪ್ಪ ಬೆನ್ನಟ್ಟಿ, ಸದಸ್ಯರು ಶೋಭಾ ಉದಯ್, ರಾಘವಾಚಾರ್, ಕೆ.ವಿ. ಸರ್ಕಲ್ ಪರಮೇಶ್ವರ, ಕೂಡ್ಲುಕೊಪ್ಪ ಕೊಲ್ಲಪ್ಪ, ಕರ್ಕಮಡಿ ಗಣಪತಿ, ಗುರುಟೆ ಸೇರಿದಂತೆ ವಿವಿಧ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಪಿ.ಆರ್. ನಾಗರಾಜ್, ಜೆ.ವಿ. ಸುಬ್ರಹ್ಮಣ್ಯ, ರವೀಶ್ ಕುಮಾರ್ ನಿಟ್ಟೂರು, ಗುರುಮೂರ್ತಿ ಬೆನ್ನಟ್ಟಿ, ವಾಸು ಬಟ್ ಹೆಬ್ಬಿಗೆ ಮತ್ತಿತರರು ಉಪಸ್ಥಿತರಿದ್ದರು.