ಅತ್ತಿಗೆಯೊಂದಿಗೆ ಅನೈತಿಕ ಸಂಬಂಧದ ಶಂಕೆ – ತಮ್ಮನನ್ನು ಕೊಲೆ ಮಾಡಿ ತೋಟದಲ್ಲಿ ಹೂತು ಹಾಕಿದ್ದ ಅಣ್ಣನ ಬಂಧನ
Brother arrested for murdering younger brother and burying him in garden, suspected of having an immoral relationship with sister-in-law

ಸೊರಬ: ಮೂರು ತಿಂಗಳ ಹಿಂದೆ ನಡೆದಿದ್ದ ಭೀಕರ ಕೊಲೆ ಪ್ರಕರಣವನ್ನು ಸೊರಬ ಪೊಲೀಸರು ಭೇದಿಸಿ, ಮಂಗಳವಾರ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಕಾನಕೊಪ್ಪ ಹೊಸೂರು ಗ್ರಾಮದ ಮಾಲತೇಶ್ (35) ಬಂಧಿತನಾಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಮಾಲತೇಶ್ ತನ್ನ ತಮ್ಮ ರಾಮಚಂದ್ರ (28)ನನ್ನು ಯೋಜಿತವಾಗಿ ಹತ್ಯೆ ಮಾಡಿ, ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯ ಜೇಡಗೇರಿ ಸಮೀಪದ ತೋಟವೊಂದರಲ್ಲಿ ಹೂತು ಹಾಕಿದ್ದಾನೆ.
ರಾಮಚಂದ್ರ ಸುಮಾರು ಒಂದೂವರೆ ತಿಂಗಳಿನಿಂದ ಮನೆಗೆ ಮರಳದ ಹಿನ್ನೆಲೆ ಪೋಷಕರು ಸೆಪ್ಟೆಂಬರ್ 8ರಂದು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಅನುಮಾನ ಆಧಾರದಲ್ಲಿ ಮಾಲತೇಶ್‌ನನ್ನು ವಿಚಾರಣೆ ನಡೆಸಿದಾಗ, ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯ ಮಾಹಿತಿ ಮೇರೆಗೆ ಜೇಡಗೇರಿ ಸಮೀಪದ ತೋಟದಲ್ಲಿ ಹೂತು ಹಾಕಲಾಗಿದ್ದ ರಾಮಚಂದ್ರನ ಮೃತದೇಹವನ್ನು ಮಂಗಳವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಮಾಲತೇಶ್ ತನ್ನ ಪತ್ನಿಯೊಂದಿಗೆ ಸಲುಗೆ ಇರಬೇಡ ಎಂದು ತಮ್ಮನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ರಾಮಚಂದ್ರ ಅದನ್ನು ಕಡೆಗಣಿಸಿದ್ದಾನೆ ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಸುಮಾರು ತಿಂಗಳ ಹಿಂದೆಯೇ ಕೊಲೆಗಾಗಿ ಪೂರ್ವಯೋಜನೆ ರೂಪಿಸಿದ್ದ ಮಾಲತೇಶ್, ಮದುವೆ ಮಾಡಿಸುವ ನೆಪದಲ್ಲಿ ಸ್ವಾಮೀಜಿಯ ಪೂಜೆ ಎಂದು ನಂಬಿಸಿ, ಕೊನೆಗೆ ಮಂಜುನಾಥ್ ಎಂಬುವರಿಗೆ ಸೇರಿದ ತೋಟಕ್ಕೆ ಕರೆಸಿ ಮದ್ಯಪಾನ ಮಾಡಿಸಿ ಕೈಕಾಲು ಕಟ್ಟಿ ಕೊಲೆ ಮಾಡಿದ್ದಾನೆ. ಬಳಿಕ ಮೊದಲೇ ತೋಡಿದ್ದ ಗುಂಡಿಯಲ್ಲಿ ಶವವನ್ನು ಹೂತು, ಮರುದಿನ ಕೆಲಸಗಾರರ ಮೂಲಕ ಗುಂಡಿಯನ್ನು ಸಂಪೂರ್ಣ ಮುಚ್ಚಿಸಿದ್ದಾನೆ.
ಆಶ್ಚರ್ಯಕರವಾಗಿ, ನಂತರ ಖುದ್ದಾಗಿ ಪೊಲೀಸ್ ಠಾಣೆಗೆ ಬಂದು ತಮ್ಮ ಕಾಣುತ್ತಿಲ್ಲ ಎಂದು ದೂರು ನೀಡಿದ್ದ ಆರೋಪಿ, ತನಿಖೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಸೊರಬ ಪೊಲೀಸರ ಕಾರ್ಯವನ್ನು ಎಸ್‌ಪಿ ಮಿಥುನ್ ಕುಮಾರ್ ಪ್ರಶಂಸಿಸಿದ್ದಾರೆ.