w
Headlines
Home » ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ – 14 ದ್ವಿಚಕ್ರ ವಾಹನಗಳು ವಶಕ್ಕೆ

ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ – 14 ದ್ವಿಚಕ್ರ ವಾಹನಗಳು ವಶಕ್ಕೆ

Screenshot 2025 11 08 17 56 47 796 com.electreps.electreps edit

ಇಬ್ಬರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ – 14 ದ್ವಿಚಕ್ರ ವಾಹನಗಳು ವಶಕ್ಕೆ

ಶಿವಮೊಗ್ಗ : ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಲಾಗಿದ್ದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಟಿಪ್ಪುನಗರದ ನಿವಾಸಿ ಶಾದಾಬ್ ಖಾನ್ (23) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು, ನೆಲ್ಲೂರು ಗ್ರಾಮದ ನಿವಾಸಿ ಶಹಬಾಜ್ ಅಹ್ಮದ್(24) ಎಂಬ ಇಬ್ಬರು ಕಳ್ಳರನ್ನು ಬಂಧಿಸಿ 14 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಇಬ್ಬರು ಕಳ್ಳರನ್ನು ಹಾಜರು ಪಡಿಸಲಾಗಿದೆ.

ಭದ್ರಾವತಿ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾ‌ರ್ ಅವರ ಮಾರ್ಗದರ್ಶನದಲ್ಲಿ ಹಳೆನಗರ ಪೊಲೀಸ್ ಠಾಣೆ ಪಿಎಸ್ ಐ ಸುನೀಲ್‌ ಬಿ.ತೇಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ. ಸಿಬ್ಬಂದಿಗಳಾದ ಹಾಲಪ್ಪ, ಚಿನ್ನಾನಾಯ್ಕ, ರಾಘವೇಂದ್ರ, ಮೌನೇಶ್, ಚಿಕ್ಕಪ್ಪ, ಉದಯ, ರಾಜು ಮತ್ತು

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.