ಕಾರು ತೆಗೆಯುವಂತೆ ಹಾರನ್ ಮಾಡಿದ್ದಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ
ಶಿವಮೊಗ್ಗ : ಅಡ್ಡ ನಿಲ್ಲಿಸಿದ್ದ ಕಾರು ತೆಗೆಯುವಂತೆ ಹಾರನ್
ಮಾಡಿದ್ದಕ್ಕೆ ನವದುರ್ಗ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಸಮೀಪ ಬ್ರೆಟ್ ಹೊಟೇಲ್ ಎದುರು ಘಟನೆ ನಡೆದಿದೆ.
ನವದುರ್ಗ ಬಸ್ ಚಾಲಕ ಬಿ.ಎಸ್.ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸು ರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರ ಬಂದು ಬೈಟ್ ಹೊಟೇಲ್ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ರವಿ ಬಸ್ ನಿಲ್ಲಿಸಿದ್ದರು. ಆಗ ಬಂದ ಕಾರೊಂದು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಲಾಯಿತು ಎಂದು ಆರೋಪಿಸಲಾಗಿದೆ.
ಕಾರು ತೆಗೆಯುವಂತೆ ಬಸ್ ಚಾಲಕ ಹಾರನ್ ಮಾಡಿದ್ದಾರೆ. ಕಾರಿನಲ್ಲಿದ್ದ ಮೂರ್ನಾಲ್ಕು ಮಂದಿ ಹೊರಗಿಳಿದು ಬಂದು ರವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರವಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




