Headlines

ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!??

ಬಾಗಿಲು ಮುರಿದು ಮನೆಗೆ ನುಗ್ಗಿದ ವಾಮಾಚಾರಿಗಳು – ಅಡಿಕೆ ಎಲೆ ಮತ್ತು 11 ರೂಪಾಯಿ ಇಟ್ಟು ಮಾಡಿದ್ದೇನು..!??

ಶಿವಮೊಗ್ಗ: ನಗರದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿ ಹುಟ್ಟಿಸುವ ಘಟನೆ ನಡೆದಿದ್ದು, ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ವಾಮಾಚಾರದ ಕೃತ್ಯ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆ ಅಕ್ಟೋಬರ್ 31, 2025 ರಂದು ಮಧ್ಯಾಹ್ನ 1ರಿಂದ 2ರ ನಡುವಿನ ಸಮಯದಲ್ಲಿ ನಡೆದಿದೆ. ದೂರುದಾರ ಮಹಿಳೆಯು ಮನೆಯಲ್ಲಿ ಇರದ ಸಮಯದಲ್ಲಿ, ಕೆಲವರು ಬಾಗಿಲು ಮುರಿದು ಮನೆಗೆ ನುಗ್ಗಿ, ಒಳಗಿದ್ದ ಸಾಮಾನುಗಳನ್ನು ನಾಶಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಕಬ್ಬಿಣದ ರಾಡ್ ಬಳಸಿ ಮನೆಯ ಬೀರು ಮುರಿದು, ಸಿಮೆಂಟ್ ಶೀಟ್ ಪುಡಿ ಮಾಡಿ ಹಾನಿ ಮಾಡಿದ್ದಾರೆ. ಬಳಿಕ ನಿಂಬೆ ಹಣ್ಣು, ಕುಂಕುಮ, ಅಡಿಕೆ ಎಲೆ ಹಾಗೂ 11 ರೂಪಾಯಿ ಇಟ್ಟು ಹೋಗಿದ್ದು, ಇದು ವಾಮಾಚಾರದ ಕೃತ್ಯ ಎಂದು ಶಂಕಿಸಲಾಗಿದೆ.

ಘಟನೆಯ ವೇಳೆ ಪಕ್ಕದ ಮನೆಯವರು ದೂರುದಾರರಿಗೆ ಕರೆಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಅವರು ತಕ್ಷಣ ಮನೆಗೆ ಧಾವಿಸಿದ್ದಾರೆ. ಬಳಿಕ ಕೃತ್ಯಕ್ಕೆ ಕಾರಣರಾದ ವ್ಯಕ್ತಿ ಹಾಗೂ ಅವರ ಕುಟುಂಬವನ್ನು ಪ್ರಶ್ನಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ದೂರುದಾರ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.