Headlines

ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ

ನಿಟ್ಟೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ – 6.5 ಕೋಟಿ ಅನುದಾನ ನೀಡಿದ ಶಾಸಕರಿಗೆ ಧನ್ಯವಾದ, ಹೊಸ ಪದಾಧಿಕಾರಿಗಳಿಗೆ ಸನ್ಮಾನ

ಹೊಸನಗರ, ನವೆಂಬರ್ 3: ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಘಟಕದ ವತಿಯಿಂದ ಕಾರ್ಯಕರ್ತರ ಸಭೆ ಜರುಗಿತು.

ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಹಸಿರೆಮಕ್ಕಿ–ಕೆ.ಬಿ. ಸರ್ಕಲ್ ರಸ್ತೆ, ರಾಮೇಶ್ವರ, ಮಹಾಗಣಪತಿ ಹಾಗೂ ವೀರಭದ್ರ ದೇವಸ್ಥಾನಗಳ ರಸ್ತೆ, ಕಾಲುಸಂಕ ನಿರ್ಮಾಣ ಹಾಗೂ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ವಿಶೇಷ ಆಸಕ್ತಿಯಿಂದ 6.5 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಘಟಕದ ವತಿಯಿಂದ ಶಾಸಕರಿಗೆ ಧನ್ಯವಾದ ಸಲ್ಲಿಸಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ಚಂದ್ರಮೌಳಿ ಅವರು, “‘ವೋಟ್ ಚೋರ್ ಸಹಿ ಸಂಗ್ರಹಣೆ’ ಅಭಿಯಾನ ತಾಲೂಕು ಮಟ್ಟದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ನಿಟ್ಟೂರು ಘಟಕವು ಬೂತ್ ಮಟ್ಟದಲ್ಲಿ ಸಂಘಟನಾ ಚಟುವಟಿಕೆಗಳಿಗೆ ಬಲ ತುಂಬುತ್ತಿದೆ,” ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು, “ದಲಿತರು, ಬಡವರು, ಹಾಗೂ ಎಲ್ಲಾ ವರ್ಗದವರು ಒಗ್ಗಟ್ಟಿನಿಂದ ಪಕ್ಷವನ್ನು ಬಲಪಡಿಸಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ್ ನಾಗೋಡಿ, ಬ್ರಾಹ್ಮಣ ಸಮಾಜದ ರಾಜ್ಯ ಮತ್ತು ಕೇಂದ್ರ ಸದಸ್ಯರಾಗಿ ಆಯ್ಕೆಯಾದ ಎನ್.ಎಸ್. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾದ ಚಂದ್ರ, ಹಾಗೂ ನಿಟ್ಟೂರು ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಂಜಪ್ಪ ಬೆನ್ನಟ್ಟಿ ಇವರಿಗೆ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ವಿಶ್ವನಾಥ್ ನಾಗೋಡಿ, ಎನ್.ಎಸ್. ರವಿಕುಮಾರ್, ಚಂದಯ್ಯ ಜೈನ್ ಮತ್ತು ಮಂಜಪ್ಪ ಬೆನ್ನಟ್ಟಿ ಅವರು ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ಭರವಸೆ ನೀಡಿದರು.

ಸಭೆಗೆ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪಿ. ಸುರೇಶ್, ರವಿ ಚನ್ನಪ್ಪ, ರವಿ ಶಿಡ್ಲಕುಣಿ, ರಾಘವಾಚಾರ್, ಓಂಕಾರ ತುರುಗೋಡು, ಶೋಭಾ ಉದಯ್, ಗಣಪತಿ ಗುರುಟೆ, ಜೆ.ವಿ. ಸುಬ್ರಹ್ಮಣ್ಯ, ನರಸಿಂಹ ಪೂಜಾರ್ ಹಾಗೂ ರವೀಶ್ ಸೇರಿದಂತೆ ಹಲವರು ಹಾಜರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಘಟಕದ ಪ್ರಧಾನ ಕಾರ್ಯದರ್ಶಿ ಗಣಪತಿ ಯಶಸ್ವಿಯಾಗಿ ನಿರ್ವಹಿಸಿದರು.