ಬಂಕಾಪುರದಲ್ಲಿ ಅಕ್ರಮ ಪಡಿತರ ಅಕ್ಕಿ ವಶಕ್ಕೆ — 380 ಚೀಲಗಳ ಜಪ್ತಿ
ಬಂಕಾಪುರ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯ ಪಡಿತರ ಅಕ್ಕಿಯ ದೊಡ್ಡ ಮೊತ್ತವನ್ನು ಬಂಕಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಶರೀಫ್ ನಗರ ನಿವಾಸಿ ಜಯದೇವ್ ಮಾಮ್ಲೆ ಪಟ್ಟಣಶೆಟ್ಟರ ಮಲ್ಲಿಕಾರ್ಜು ಎಂಬ ವ್ಯಕ್ತಿಯು ಬಾಡಿಗೆಗೆ ಪಡೆದಿದ್ದ ಮಲ್ಲೇಶಪ್ಪ ಮಾಳಗಿಮನಿ ಅವರ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.
ದಾಳಿಯಲ್ಲಿ ಸುಮಾರು ₹3.34 ಲಕ್ಷ ಮೌಲ್ಯದ 380 ಚೀಲಗಳ ಅಕ್ಕಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸಂಬಂಧಪಟ್ಟ ಆರೋಪಿಗಳ ವಿರುದ್ಧ ತನಿಖೆ ಪ್ರಗತಿಯಲ್ಲಿದೆ.
ಅನ್ನಭಾಗ್ಯ ಪಡಿತರ ಅಕ್ಕಿಯ ಅಕ್ರಮ ಸಂಗ್ರಹ – ಬಂಕಾಪುರ ಪೊಲೀಸ್ ಜಪ್ತಿ
ವರದಿ : ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ – ಬಂಕಾಪುರ