Headlines

ವೃಕ್ಷಮಾತೆ ತಿಮ್ಮಕ್ಕ ಸ್ಮರಣೆಗೆ ಶಿಗ್ಗಾವಿಯಲ್ಲಿ ಸಸಿ ನೆಡುವ ಮೂಲಕ ಗೌರವ

ಹಾವೇರಿ: ಜಿಲ್ಲೆಯ ಶಿಗ್ಗಾವಿಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಸಂದರ್ಭದಲ್ಲಿ, ಶಿಗ್ಗಾವಿ ನಗರದಲ್ಲಿರುವ ಶಬರಿಗಿರಿ ವೈಷ್ಣವಿ ಉದ್ಯಾನವನದಲ್ಲಿ ಅವರ ಸ್ಮರಣಾರ್ಥವಾಗಿ ಸಸಿಗಳನ್ನು ನೆಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಸಿ ತಿಮ್ಮಕ್ಕ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಶಬರಿಗಿರಿ ವೈಷ್ಣವಿ ಬಡಾವಣೆಯ ವೈ.ಎಸ್. ಪಾಟೀಲ್, ಮಲ್ಲಪ್ಪ ಚಕ್ರಸಾಲಿ, ಚನ್ನಪ್ಪ ನೆಲೋಗಲ್, ಶಿವಲಿಂಗಪ್ಪ ಹುರಳಿ, ಬಸವರಾಜ್ ಬಸರಿಕಟ್ಟಿ ಹಾಗೂ ರಾಜ್ ಡಾನ್ಸ್ ಸ್ಕೂಲಿನ ಮಕ್ಕಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ವರದಿ : ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ – ಬಂಕಾಪುರ