Headlines

ಆನಂದಪುರದಲ್ಲಿ ಅಕ್ರಮ ಮರಳು ಸಾಗಣೆ ಪತ್ತೆ: ಲಾರಿ ಜಫ್ತಿ

ಆನಂದಪುರದಲ್ಲಿ ಅಕ್ರಮ ಮರಳು ಸಾಗಣೆ ಪತ್ತೆ: ಲಾರಿ ಜಫ್ತಿ

ಆನಂದಪುರ: ಖಚಿತ ಮಾಹಿತಿಯ ಆಧಾರದಲ್ಲಿ ಆನಂದಪುರ ಪೊಲೀಸ್ ಠಾಣೆಯ ಪಿಎಸೈ ಪ್ರವೀಣ್ ಎಸ್.ಪಿ. ಅವರ ನೇತೃತ್ವದ ಪೊಲೀಸರು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರಳು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ತಾಲ್ಲೂಕಿನ ಆನಂದಪುರದ ಸುತ್ತಮುತ್ತ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿ ಐಜಿ ಸ್ಕ್ವಾಡ್‌ನಿಂದ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಪಾಸಣೆ ಕೈಗೊಂಡು ರೇಡ್ ನಡೆಸಿದರು.

ಬಸವನಹೊಂಡ ಗ್ರಾಮದ ಕೆಂಜಿಗಾಪುರ ಕ್ರಾಸ್ ಬಳಿಯ ಹೊಸನಗರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ತಂಡವು ಸಂಶಯಾಸ್ಪದ ಲಾರಿಯನ್ನು ತಡೆದಾಗ, ಚಾಲಕ ಲಾರಿಯನ್ನು ರಸ್ತೆಯ ಬದಿಗೆ ನಿಲ್ಲಿಸಿ ಸ್ಥಳದಿಂದ ಪರಾರಿಯಾದಾನೆ.

ಪೊಲೀಸರು ನಂತರ ಲಾರಿಯನ್ನು ಸೀಜ್ ಮಾಡಿ ಠಾಣೆಗೆ ಕೊಂಡೊಯ್ದಿದ್ದು, ಅಕ್ರಮ ಮರಳು ಸಾಗಣೆ ಕುರಿತಾಗಿ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.