“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!”
“ಒಂದು ಕಂತು ಬಾಕಿ – ರೈತನ ಮನೆಗೆ ನುಗ್ಗಿ ಜಾನುವಾರು ಎಳೆದೊಯ್ದ ಫೈನಾನ್ಸ್ ಗೂಂಡಾಗಳು!” ಶಿವಮೊಗ್ಗ: ಜಿಲ್ಲೆಯಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ ‘ಗುಂಡಾಗಿರಿ’ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೇವಲ ಒಂದು ತಿಂಗಳ ಕಂತು ಬಾಕಿ ಇಟ್ಟ ಕಾರಣಕ್ಕೆ ರೈತನ ಜೀವಾಳವಾದ ಜಾನುವಾರುಗಳನ್ನು ಬಲಪ್ರಯೋಗದಿಂದ ಎಳೆದೊಯ್ದಿರುವ ಗೃಹಹಲ್ಲೆಯಂತ ಘಟನೆ ಸಿದ್ಲಿಪುರದಲ್ಲಿ ನಡೆದಿದೆ. ಸಿದ್ಲಿಪುರ ಗ್ರಾಮದ ಭರತ್ ಎಂಬ ಕೃಷಿಕರು 2 ಲಕ್ಷ ರೂಪಾಯಿ ಲೋನ್ ಪಡೆದಿದ್ದರು. ನಿಯಮಿತವಾಗಿ ತಿಂಗಳಿಗೆ ₹9,000 ಕಂತು ಪಾವತಿಸುತ್ತಿದ್ದರೂ, ಹಾಲಿಡುವ ಹಸು ಅಕಾಲಿಕವಾಗಿ ಸಾವನ್ನಪ್ಪಿದ…