Headlines

ಡ್ಯಾಂ ಹಿನ್ನೀರಿನಲ್ಲಿ ವ್ಯಕ್ತಿಯ ಶವ ಪತ್ತೆ

ಡ್ಯಾಂ ಹಿನ್ನೀರಿನಲ್ಲಿ ವ್ಯಕ್ತಿಯ ಶವ ಪತ್ತೆ

ಕಾರ್ಗಲ್: ಇಲ್ಲಿಗೆ ಸಮೀಪದ ಕಣೇಕಾರು ಮಜಿರೆ ಗ್ರಾಮದ ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮೃತದೇಹ ಪತ್ತೆಯಾಗಿದೆ.

ಎ.ಚಂದ್ರಶೇಖರ (೨೮) ಮೃತರು. ಚಾಲಕ ವೃತ್ತಿ ಮಾಡುತ್ತಿದ್ದ ಇವರು, ಮೂರು ದಿನಗಳ ಹಿಂದೆ ಕಾರ್ಗಲ್ ಕೆಪಿಸಿ ಪವರ್ ಚಾನಲ್ ಬಳಿ ಬೈಕ್ ಬಿಟ್ಟು ಕಾಣೆಯಾಗಿದ್ದರು.

ತಳಕಳಲೆ ಜಲಾಶಯದ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ನಾಗರಾಜ್, ಸಿಬ್ಬಂದಿ ಅಣ್ಣಪ್ಪ, ಜಯೇಂದ್ರ, ಪುರುಷೋತ್ತಮ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು