Headlines

SAGARA | ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ,ಯುವಕನಿಗೆ ಗಂಭೀರ ಗಾಯ – ಕೊಲೆಯತ್ನ ಪ್ರಕರಣ ದಾಖಲು

SAGARA | ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ,ಯುವಕನಿಗೆ ಗಂಭೀರ ಗಾಯ – ಕೊಲೆಯತ್ನ ಪ್ರಕರಣ ದಾಖಲು

ಸಾಗರ ಪಟ್ಟಣದ ಹಳೆ ಖಾಸಗಿ ಬಸ್ ನಿಲ್ದಾಣದ ಸಮೀಪದ ಹೋಟೆಲ್‌ವೊಂದರಲ್ಲಿ ಶುಕ್ರವಾರ ಸಂಜೆ ಎರಡು ಗುಂಪುಗಳ ನಡುವೆ ವಾಗ್ವಾದ ತೀವ್ರಗೊಂಡು ಮಾರಣಾಂತಿಕ ಹೊಡೆದಾಟ ನಡೆದಿದ್ದು ಪುರಪ್ಪೆಮನೆ ಗ್ರಾಮದ ಮಂಜುನಾಥ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ಹಿನ್ನೆಲೆಯಲ್ಲಿ ಕುಗ್ವೆ ಗ್ರಾಮದ ಸೋಮಶೇಖರ್, ಶಿವಾನಂದ ಮತ್ತು ಅವಿನಾಶ್ ವಿರುದ್ಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಮಾರಣಾಂತಿಕ ದಾಳಿ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಗಾಯಗೊಂಡ ಮಂಜುನಾಥ್ ಅವರನ್ನು ತುರ್ತುವಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.