ಭರ್ಜರಿ 19 ಗಂಟೆಗಳ ಭಾರಿ ಜನಸ್ತೋಮದ ಮೆರವಣಿಗೆ ಬಳಿಕ ರಿಪ್ಪನ್‌ಪೇಟೆ ಗಣಪತಿ ತಾವರೆಕೆರೆಯಲ್ಲಿ ಜಲಸ್ಥಂಭನ
ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 58 ನೇ ವರ್ಷದ ಗಣೇಶೋತ್ಸವದ ಗಣಪತಿ ವಿಸರ್ಜನೆ 19 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವವು ಶಾಂತಿಯುತವಾಗಿ ನೆರವೇರಿತು.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 19 ಗಂಟೆಗಳ ಕಾಲ ರಾಜಬೀದಿ ಉತ್ಸವ ನಡೆಯಿತು.ಶನಿವಾರ ಸಂಜೆ 5.30 ಕ್ಕೆ ಆರಂಭವಾಗಿದ್ದ ಮೆರವಣಿಗೆ ಭಾನುವಾರ ಮಧ್ಯಾಹ್ನ12.30 ಕ್ಕೆ ಕೊನೆಗೊಂಡು ವಿಸರ್ಜನೆ ನೆರವೇರಿತು.
ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗಿಯಾದರು.ಚಿಕ್ಕ ಮಕ್ಕಳಿನಿಂದ ಹಿಡಿದು ವಯೋವೃದ್ದರು ,ಮಹಿಳೆಯರು ಪಾಲ್ಗೊಂಡರು.ಪಟ್ಟಣದ ಹೊಸನಗರ ರಸ್ತೆಯಲ್ಲಿನ ತಾವರೆಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಯಿತು.
ನೂರಾರು ಪೊಲೀಸ್ ಬಿಗಿ ಬಂದೋಬಸ್ತ್ ಪಟ್ಟಣದಾದ್ಯಂತ ಮಾಡಲಾಗಿತ್ತು.ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.ಸಿಪಿಐ ಗುರಣ್ಣ ಹೆಬ್ಬಾಳ್ ನೇತ್ರತ್ವದಲ್ಲಿ ಬಂದೋಬಸ್ತ್ ನಡೆದಿತ್ತು.ಪಿ ಎಸ್ ಐ ರಾಜುರೆಡ್ಡಿ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡು ಅವಲೋಕಿಸಿದರು.
ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ ಸಲ್ಲಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ಉತ್ಸವದಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಪಾಲ್ಗೊಂಡು ಗಣಪತಿಗೆ ಮಾಲಾರ್ಪಣೆ ಸಲ್ಲಿಸಿ ದರ್ಶನ-ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ಪಿ.ಸುಧೀರ್, ಕಾರ್ಯದರ್ಶಿ ಮುರುಳಿಧರ ಕೆರೆಹಳ್ಳಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎಂ.ಸುರೇಶಸಿಂಗ್, ಜಗನ್ನಾಥ ಬಂಗೇರಾ, ಪದ್ಮಾ ಸುರೇಶ, ರೇಖಾ ರವಿ, ಅಶ್ವಿನಿ, ಜಿ.ಡಿ.ಮಲ್ಲಿಕಾರ್ಜುನ, ರಾಘು ಆರ್ಟ್ಸ್, ಸುಧೀಂದ್ರ ಪೂಜಾರಿ, ಲಕ್ಷ್ಮಿ ಶ್ರೀನಿವಾಸ ಆಚಾರ್, ಮೆಣಸೆ ಆನಂದ ಹಾಗೂ ಅನೇಕ ಗಣ್ಯರು ಹಾಜರಿದ್ದರು.