w
Headlines
Home » ದೇವಸ್ಥಾನದಲ್ಲಿ ಕಳ್ಳತನ – ಎರಡು ಗಂಟೆಯೊಳಗೆ ಆರೋಪಿ ಬಂಧನ

ದೇವಸ್ಥಾನದಲ್ಲಿ ಕಳ್ಳತನ – ಎರಡು ಗಂಟೆಯೊಳಗೆ ಆರೋಪಿ ಬಂಧನ

GridArt 20250910 184851139 wm

ದೇವಸ್ಥಾನದಲ್ಲಿ ಕಳ್ಳತನ – ಎರಡು ಗಂಟೆಯೊಳಗೆ ಆರೋಪಿ ಬಂಧನ

ತೀರ್ಥಹಳ್ಳಿ: ದೇವಸ್ಥಾನದಲ್ಲಿ ನಡೆದ ಕಳ್ಳತನದ ಕೇವಲ 2 ಗಂಟೆಗಳೊಳಗೆ ಆಗುಂಬೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಸಂಕದಹೊಳೆ ಸಮೀಪ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆಗುಂಬೆ ಶ್ರೀರಾಮಮಂದಿರದಲ್ಲಿ ಸೋಮವಾರ ರಾತ್ರಿ ರಾಮ ದೇವರ ಕೈಯಲ್ಲಿದ್ದ ಬಿಲ್ಲು ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಲಾಗಿತ್ತು. ವಿಷಯ ತಿಳಿದ ತಕ್ಷಣವೇ ಪೊಲೀಸರು ತನಿಖೆ ಆರಂಭಿಸಿ, ಸುಂಕದಹೊಳೆ ಸಮೀಪದ ಏಳಮಲೈ ನಿವಾಸಿ ಮನೋಜ್ ಆಲಿಯಾಸ್ ಗುಂಡ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿತನಿಂದ ದೇವಾಲಯದಲ್ಲಿ ಕಳವು ಮಾಡಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಗುಂಬೆ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಶಿವನಗೌಡ ಅವರ ನೇತೃತ್ವದ ಪೊಲೀಸ್ ತಂಡವು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಚೇತನ ಹಾಗೂ ಆದರ್ಶ ಪ್ರಮುಖ ಪಾತ್ರವಹಿಸಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.