Headlines

ನಾಗರ ಹಾವಿನ ಹುಟ್ಟುಹಬ್ಬ ಆಚರಿಸಿ ಸಂಭ್ರಮ ; ಜೈಲುಪಾಲಾದ ಯುವಕ

ನಾಗರ ಹಾವಿನ ಹುಟ್ಟುಹಬ್ಬ ಆಚರಿಸಿ ಸಂಭ್ರಮ; ಜೈಲುಪಾಲಾದ ಯುವಕ

ಧುಲೆ (ಮಹಾರಾಷ್ಟ್ರ): ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ಪ್ರೀತಿಪಾತ್ರರು, ಸ್ನೇಹಿತರು, ಕುಟುಂಬಸ್ಥರು ಹಾಗೂ ತಮ್ಮ ಪ್ರೀತಿಯ ಸಾಕು ಪ್ರಾಣಿಗಳ ಹುಟ್ಟುಹಬ್ಬವನ್ನೂ ಸಹ ಆಚರಣೆ ಮಾಡಿ ಸಂಭ್ರಮಿಸುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಹಾವಿನ ‘ಹುಟ್ಟುಹಬ್ಬ’ ಆಚರಣೆ ಮಾಡಿದ್ದಾನೆ! ವಿಡಿಯೋ ವೈರಲ್ ಆಗುತ್ತಿದ್ಧಂತೆ ಆತ ಜೈಲುಪಾಲಾಗಿದ್ದಾನೆ.


ಮಹಾರಾಷ್ಟ್ರದ ಧುಲೆಯಲ್ಲಿ ಈ ಘಟನೆ ವರದಿಯಾಗಿದೆ. ನಾಗರಹಾವಿನ ಹುಟ್ಟುಹಬ್ಬ ಆಚರಿಸುತ್ತಿದ್ದ ರೀಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಯುವಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಆತನನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.


ನಾಗರ ಹಾವಿನ ಹುಟ್ಟುಹಬ್ಬ ಆಚರಣೆ


ಬಂಧಿತ ಯುವಕನನ್ನು ಧುಲೆ ಜಿಲ್ಲೆಯ ಶಿರ್ಪುರ್ ತಾಲೂಕಿನ ಬೋರೆಡಿ ಗ್ರಾಮದ ನಿವಾಸಿ ರಾಜ್ ಸಾಹೇಬ್ ರಾವ್ ವಾಘ್ ಎಂದು ಗುರುತಿಸಲಾಗಿದೆ ಎಂದು ಅರಣ್ಯ ರಕ್ಷಕ ಕಿರಣ್ ಗಿರ್ವಾಲೆ ಅವರಿಗೆ ಮಾಹಿತಿ ನೀಡಿದ್ದಾರೆ.


ನಾಗರ ಪಂಚಮಿಯಂದು ಹಾವಿನ ಹುಟ್ಟಹಬ್ಬ ಆಚರಣೆ : ಕಳೆದ ತಿಂಗಳು, ನಾಗರ ಪಂಚಮಿಯ ದಿನದಂದು (ಜುಲೈ 29), ವಾಘ್ ಗ್ರಾಮದ ಬಳಿ ನಾಗರಹಾವನ್ನು ಹಿಡಿದು, ಅದನ್ನು ಮನೆಗೆ ತಂದ ಯುವಕ, ಬಳಿಕ ಕೇಕ್ ಕತ್ತರಿಸಿ ಅದರ ಹುಟ್ಟುಹಬ್ಬ ಆಚರಿಸಿದ್ದ. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಅದು ಭಾರಿ ವೈರಲ್ ಆಗಿತ್ತು.