ಎದೆನೋವಿನಿಂದ ಮೃತಪಟ್ಟ ಮಾಲೀಕನಿಗಾಗಿ ಆಸ್ಪತ್ರೆಯಲ್ಲೆ ಠಿಕಾಣಿ ಹೂಡಿದ ನಾಯಿ
ಎದೆನೋವಿನಿಂದ ಮೃತಪಟ್ಟ ಮಾಲೀಕನಿಗಾಗಿ ಆಸ್ಪತ್ರೆಯಲ್ಲೆ ಠಿಕಾಣಿ ಹೂಡಿದ ನಾಯಿ ಶಿವಮೊಗ್ಗ : ಮೃತ ಯಜಮಾನನನ್ನು ಹುಡುಕಿಕೊಂಡು ಆಸ್ಪತ್ರೆ ಆವರಣದಲ್ಲಿ ಠಿಕಾಣಿ ಹೂಡಿದ ನಾಯಿಯೊಂದನ್ನು ಹಿಡಿಯಲಾಗಿದೆ. ಕನ್ನೆಕೊಪ್ಪದ ಪಾಲಾಕ್ಷಪ್ಪ ಹದಿನೈದು ದಿನಗಳ ಹಿಂದೆ ಎದೆನೋವಿನಿಂದ ಬಳಲಿ ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯಘಾತವನ್ನು ದೃಡಪಡಿಸಿದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿದ್ದಾರೆ. ಚಿಕಿತ್ಸೆ ಪಲಿಸದೆ ಮೆಗ್ಗಾನ್‌ನಲ್ಲಿ ಪಾಲಾಕ್ಷಪ್ಪ ಮೃತಪಟ್ಟಿದ್ದಾರೆ. ಆದರೆ ಎದೆನೋವಿನಿಂದ ಬಳಲುತ್ತಿದ ವ್ಯಕ್ತಿಯೊಂದಿಗೆ ಬಂದಿದ ನಾಯಿ ತನ್ನ ಮಾಲೀಕ ಪಾಲಾಕ್ಷಪ್ಪ ಆಸ್ಪತ್ರೆಯಲ್ಲೆ ಉಳಿದಿದ್ದಾರೆಂದು ತಿಳಿದು…