ಗಣೇಶೋತ್ಸವ ,ಈದ್ ಮಿಲಾದ್ ಹಿನ್ನಲೆ – ರಿಪ್ಪನ್‌ಪೇಟೆಯಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಪೊಲೀಸರಿಂದ ಪಥಸಂಚಲನ
ರಿಪ್ಪನ್‌ಪೇಟೆ : ಮುಂಬರುವ ಗಣೇಶ ವಿಸರ್ಜನಾ ಮೆರವಣಿಗೆ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF), ಸ್ಪೆಷಲ್ ಆ್ಯಕ್ಷನ್ ಫೋರ್ಸ್ (SAF) ಹಾಗೂ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಪಥಸಂಚಲನ ನಡೆಯಿತು.
ಶಿವಮೊಗ್ಗ ರಸ್ತೆಯಿಂದ ಪ್ರಾರಂಭಗೊಂಡ ಈ ಪಥಸಂಚಲನ ವಿನಾಯಕ ವೃತ್ತ ಸೇರಿ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಮೆರವಣಿಗೆಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸದಂತೆ ಮುಂಗಡ ಕ್ರಮವಾಗಿ ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಮೆರವಣಿಗೆ ಸಾಗುವ ಮಾರ್ಗಗಳ ಪರಿಶೀಲನೆ ನಡೆಯಿತು.
ಈ ಸಂದರ್ಭದಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಕಮಾಂಡರ್, ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಕಮಾಂಡರ್, ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್, ರಿಪ್ಪನ್ ಪೇಟೆ ಪಿಎಸೈ ರಾಜುರೆಡ್ಡಿ ಸೇರಿದಂತೆ ಪೊಲೀಸರ ಪಡೆ ಭಾಗವಹಿಸಿತು.