Headlines

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗೃಹಿಣಿ ಬಲಿ

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಗೃಹಿಣಿ ಬಲಿ

ದಾವಣಗೆರೆ: ಸಾಲದ ಕಂತು ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಸಾಲು ವಸೂಲಾತಿಗಾಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಎದುರಿಸುತ್ತಿದ್ದ ಗೃಹಿಣಿ ಒಬ್ಬರು ಮಾನಸಿಕ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ ಘಟನೆ  ದಾವಣಗೆರೆ ಯ ಕುಂದುವಾಡದಲ್ಲಿ ಸಂಭವಿಸಿದೆ.

ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಳೆ ಕುಂದುವಾಡ ಗ್ರಾಮದ ಮಂಜುನಾಥ್ ಅವರ ಪತ್ನಿ ಮಹಾದೇವಿ (32) ಶರಣಾದವರು.

ಎರಡು ವಾರಗಳಿಂದ ಜನಾ ಫೈನಾನ್ಸ್ ಸೇರಿದಂತೆ ಫೈನಾನ್ಸ್ ಗಳಿಗೆ ಕಂತು ಕಟ್ಟದ ಕಾರಣಕ್ಕೆ ಫೈನಾನ್ಸಿನ ವಸೂಲಾತಿ ಸಿಬ್ಬಂದಿ ಮರುಪಾವತಿಗೆ ಕಿರುಕುಳ ಕೊಟ್ಟಿದ್ದರು. ಇದರಿಂದಾಗಿ ಗೃಹಿಣಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.