ಬಾವಿಗೆ ಹಾರಿ ಮಾಜಿ ಯೋಧ ಆತ್ಮಹತ್ಯೆ
ಕುಂಸಿ: ಮಾಜಿ ಸೈನಿಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕುಂಸಿ ಸಮೀಪದ ಚಿನ್ಮನೆ ಗ್ರಾಮದ ಮಾಜಿ ಯೋಧ ಡಿ.ಆರ್.ಸುರೇಶಪ್ಪ ದೊಡ್ಮನೆ (೬೬) ಆತ್ಮಹತ್ಯೆ ಮಾಡಿಕೊಂಡವರು.
ಗುರುವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಊರಿನಲ್ಲಿ ವ್ಯವಸಾಯದ ಜೊತೆಗೆ ಅಂಗಡಿ ನಡೆಸುತ್ತಿದ್ದರು.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸತ್ತು ತನ್ನ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.