ಸಮಟಗಾರು ಶಾಲೆಗೆ ಶ್ರೀಗಂಧ ಫೌಂಡೇಶನ್‌ನಿಂದ ಶಿಕ್ಷಣ ಸಾಮಗ್ರಿ ವಿತರಣೆ
ಹುಂಚ : ಶ್ರೀಗಂಧ ಫೌಂಡೇಶನ್ (ರಿ.), ಬೆಂಗಳೂರು ವತಿಯಿಂದ ಸಮಟಗಾರು ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟುಪುಸ್ತಕ, ಬ್ಯಾಗ್, ಲೇಖನ ಸಾಮಗ್ರಿ ಮತ್ತು ರೇನ್‌ಕೋಟ್ ವಿತರಿಸಲಾಯಿತು.
ಶಾಲೆಯೊಂದಿಗೆ ಹತ್ತು ವರ್ಷದ ನಂಟನ್ನು ನೆನಪಿಸಿಕೊಂಡು ‘ದಶಕ ಸಂಚಿಕೆ’ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರು, ದಾನಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯವ್ಯಾಪ್ತಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಹರ್ಷದಿಂದ ಎಲ್ಲರೂ ಪ್ರಶಂಸಿಸಿದರು.
ಸಂಸ್ಥೆಯ ರೂವಾರಿಗಳಲ್ಲೊಬ್ಬರಾದ ಸುಂದರೇಶ್ ರವರು ಮಾತನಾಡಿ ಶಾಲೆಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಎಲ್ಲರೂ ಉಳ್ಳವರಾಗಿ ಬಡತನ ನಿರ್ಮೂಲನೆಯಾಗಲಿ ಸಶಕ್ತ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು.
ಶ್ರೀಧರಮೂರ್ತಿ ಕಡಸೂರು ಮಾತನಾಡಿ ಸದ್ಗುಣಗಳ ಗಂಧವಾಹಕರಂತಿರುವ ಶ್ರೀಗಂಧ ಫೌಂಡೇಶನ್ ನ ಕಾರ್ಯವ್ಯಾಪ್ತಿಯ ಅಗಾಧತೆ ಕುರಿತು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಅಭಿನವ್ ಕಲ್ಪನಾ ದಂಪತಿಗಳನ್ನು ಗೌರವಿಸಲಾಯಿತು.
ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ಮೋಹನ್ ಶ್ರೀಗಂಧ ಫೌಂಡೇಶನ್ ನ ಅಧ್ಯಕ್ಷರಾದ ಪ್ರಶಾಂತ್ ಪತಂಗೆ , ನಿಕಟಪೂರ್ವ ಅಧ್ಯಕ್ಷರಾದ ಆನಂದ, ಫೌಂಡೇಶನ್ ನ ಸದಸ್ಯರು , ಮುಖ್ಯಶಿಕ್ಷಕರಾದ ರತ್ನಕುಮಾರಿ ಹಾಗೂ ಶಿಕ್ಷಕ ವೃಂದ ಎಸ್ ಡಿ ಎಂ ಸಿಯ ಸದಸ್ಯರು ಗ್ರಾಮಸ್ಥರು, ಪೋಷಕವೃಂದ, ಹಿರಿಯ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.