POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಪಹಲ್ಗಾಮ್ ನಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ತಾಯಿ ಸಿಂದೂರ್ ಆಪರೇಷನ್ ಬಗ್ಗೆ ಹೇಳೀದ್ದೇನು..!??

IMG 20250507 WA0001.jpg

ತಾಯಂದಿರ ಸಿಂಧೂರ ಉಳಿಸುವ ನಿಟ್ಟಿನಲ್ಲಿ ದಾಳಿ – ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗ : ಪೆಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರ ಮೇಲೆ ಭಾರತ ದೇಶ ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ದಾಳಿ ನಡೆಸಿ 9 ಉಗ್ರರ ತಾಣದ ಮೇಲೆ ದಾಳಿ ನಡೆಸಿರುವುದು ಬಹಳ ಸಂತೋಷ ತಂದಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ. 
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕ್ ನಲ್ಲಿ ಎಮೆರ್ಜೆನ್ಸಿ ಹೇರಲಾಗಿದೆ. ಭಾರತ ಇಷ್ಟು ಬೇಗ ಪ್ರತಿಕಾರ ಹೇಳುತ್ತೆ ಎಂದು ಅಂದುಕೊಂಡಿರಲಿಲ್ಲ. ಇದೊಂದು ಭಾರತೀಯ ವಾಯುದಳದ ದಿಟ್ಟ ಹೆಜ್ಜೆ ಎಂದು ತಿಳಿಸಿದ್ದಾರೆ. 

ಯುದ್ದಕ್ಕೆ ಪ್ರಚೋದನೆಯನ್ನ ಪಾಕ್ ಮಾಡಿತ್ತು. ಆದರೆ ಪಾಕ್ ನ ಪ್ರಜೆಗಳ ಮೇಲೆ ಆಗಲಿ ಅಥವಾ ಸೇನೆಯ ಮೇಲೆ ದಾಳಿ ನಡೆಸಿಲ್ಲ. ಮಸೀದಿ ಅಥವಾ ನಾಗರೀಕರ ಮೇಲೆ ನಡೆದಿಲ್ಲ. ಉಗ್ರರ ತಾಣದ ಮೇಲೆ ದಾಳಿ ನಡೆದಿದೆ. ಇದು ಗಮನಿಸಬೇಕಾದ ವಿಷಯವಾಗಿದೆ. ಕಳೆದ ಎರಡು ಮೂರು ವರ್ಷದಿಂದ ಚರ್ಚೆ ನಡೆದಿತ್ತು ಆದರೆ ಪಿಒಕೆಯನ್ನ ವಶಪಡಿಸಿಕೊಳ್ಳಲು ಇದು ಸದಾವಕಾಶವಾಗಿದೆ ಎಂದರು.

ಹಿಂದೂಗಳ ತಾಯಂದಿರ ಮೇಲೆ ಸಿಂಧೂರ ಇಡುವ ಹೆಸರಿನಲ್ಲಿ ಆಪರೇಷನ್ ಸಿಂಧೂರ ಎಂದು ಹೆಸರಿಸಲಾಗಿದೆ. ತಾಯಂದಿರ ಸಿಂಧೂರ ಉಳಿಸುವ ಚಿಂತನೆಯನ್ನ ಇಟ್ಟುಕೊಂಡು ದಾಳಿ ನಡೆಸಲಾಗಿದೆ.  ರಕ್ಷಣೆ ವಿಚಾರದಲ್ಲಿ ಎಲ್ಲರೂ ಪ್ರಧಾನಿ ಮತ್ತು ದೇಶದ ಜೊತೆ ಇರುವಂತೆ ಮನವಿ ಮಾಡಿದರು.

ಪಹಲ್ಗಾಮ್ ನಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ತಾಯಿ ಸಿಂದೂರ್ ಆಪರೇಷನ್ ಬಗ್ಗೆ ಹೇಳೀದ್ದೇನು..!??

ಶಿವಮೊಗ್ಗ: ಪಹಲ್ಗಾಮ್‌ ದಾಳಿಗೆ ಪ್ರತ್ಯುತ್ತರವಾಗಿ ಭಾರತ ತಡ ರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್‌ ಸಿಂಧೂರ  ಹೆಸರಿನಲ್ಲಿ ನಡೆದ ದಾಳಿಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಶಿವಮೊಗ್ಗ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್ ರಾವ್‌ ಅವರ ತಾಯಿ ಸುಮತಿ ಮಾಧ್ಯಮಗಳ ಜೊತೆಗೆ ಮಾತನಾಡಿ ಕುಟುಂಬದಲ್ಲಿ ಯಜಮಾನ ಯಾವುದೇ ತೀರ್ಮಾನ ಕೈಗೊಂಡರು ನಾವೆಲ್ಲ ಬದ್ಧರಾಗಿರುತ್ತೇವೆ. ಹಾಗೆಯೆ ನಮ್ಮ ದೇಶವನ್ನು ಕುಟುಂಬ ಎಂದು ಪರಿಗಣಿಸಿದರೆ ಮೋದಿ ಅವರು ಯಜಮಾನನ ಸ್ಥಾನದಲ್ಲಿದ್ದಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹೊರ ದೇಶಕ್ಕೆಲ್ಲ ಆರಾಮವಾಗಿ ಹೋಗಿ ಬರುತ್ತಾರೆ. ಆದರೆ ನಮ್ಮದೇ ದೇಶದಲ್ಲಿ ನಾವು ಓಡಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಅನಿಸುತ್ತಿತ್ತು. ನನ್ನ ಮಗ ಪ್ರಕೃತಿ ಸೌಂದರ್ಯ ನೋಡಿ ಬರಲು ಹೋಗಿದ್ದವನು. ಮಲೆನಾಡಿನಲ್ಲಿ ಹುಟ್ಟಿದವನು ಅಲ್ಲಿ ಹೋಗಿ ಅನಾಥವಾಗಿ ಸಾವನ್ನಪ್ಪಿದ್ದ. ಇದು ನನಗೆ ಬಹಳ ನೋವಿದೆ. ಮೋದಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಇನ್ನು ಮಂಗಳವಾರ ಸಂಜೆ ಎನ್‌ಐಎ ಅಧಿಕಾರಿಗಳು ಬಂದಿದ್ದರು. ಸರ್ಕಾರದ ಕಡೆಯಿಂದ ಎಂದು ತಿಳಿಸಿದ್ದರು. ಏನೆಲ್ಲಾ ಪ್ರಶ್ನೆಗಳನ್ನು ಕೇಳಿದರು ನಾವು ಉತ್ತರ ನೀಡಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.