ಹಲವು ರಾಜಕೀಯ ಮುಖಂಡರಿಗೆ ಸಾವಿದೆ : ಮತ್ತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ!
ಕೋಡಿಮಠದ ಶ್ರೀಗಳು ಆಗಾಗ ದೇಶದ, ರಾಜ್ಯದ ಬಗ್ಗೆ ಭವಿಷ್ಯವನ್ನ ನುಡಿಯುತ್ತಲೇ ಇರುತ್ತಾರೆ. ಅದು ಯಾವಾಗಲೂ ನಿಜವಾಗಿದೆ ಕೂಡ. ಇದೀಗ ಮತ್ತೆ ಭವಿಷ್ಯ ನುಡಿದಿದ್ದಾರೆ. ಮತ್ತೆ ರಾಜಕೀಯ ಕುರಿತು ಭವಿಷ್ಯ ನುಡಿದಿದ್ದು, ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ ಎಂದು ಹೇಳಿದ್ದಾರೆ.
ಇನ್ನು ಕೊರೊನ ಸೋಂಕು ಕುರಿತು ಈಗಾಗಲೇ ಅಲ್ಲಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ಸಂಬಂಧ ಈಗಾಗಲೇ ಜನರಿಗೆ ಆತಂಕ ಶುರುವಾಗಿದೆ. ಇದರನಡುವೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇನ್ನು ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರುವುದು ಒಳ್ಳೆಯದು. ಉಸಿರಾಟದ ತೊಂದರೆಯಾಗಿ ಸಾವು ಸಂಭವಿಸುವ ಸಾಧ್ಯತೆ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕಕ್ಕೆ ವಾಯು ಹಾಗೂ ಜಲದಿಂದ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪುವ ಸಾಧ್ಯತೆ ಇದೆ. ಭೂಕಂಪಗಳು ಸಂಭವಿಸಲಿವೆ. ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯವಾಗಿ ಅರಸನ ಮನೆಗೆ ಕಾರ್ಮೋಡ ಕವಿದಿತ್ತು. ಯುದ್ಧ ಭೀತಿ ಮತ್ತೆ ಆರಂಭವಾಗಲಿದೆ. ಜನರಲ್ಲಿ ಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗಲಿವೆ ಎಂದು ಹೇಳಿದ್ದಾರೆ.