POSTMAN NEWS

ನೈಜ ಸುದ್ದಿ ನೇರ ಬಿತ್ತರ..

RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು

JPEG 20250508 160239 8722520168813568174.jpg

RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು

RIPPONPETE | ಜಂಬಳ್ಳಿ ತಿರುವಿನಲ್ಲಿ ಬೈಕ್ ಮತ್ತು ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ – ಪಟ್ಟಣದ ಎಗ್ ರೈಸ್ ಅಂಗಡಿ ಮಾಲೀಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಬಸ್ ನಿಲ್ದಾಣದ ತಿರುವಿನಲ್ಲಿ ಬೊಲೆರೋ ಪಿಕಪ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಶಿವಪುರ ಸಮೀಪದ ಹುಳಿಗದ್ದೆ ಗ್ರಾಮದ ಮಂಜುನಾಥ್ ಕೋಂ ಶೇಖರಪ್ಪ ಶೆಟ್ಟಿ (39) ಮೃತ ದುರ್ಧೈವಿಯಾಗಿದ್ದಾರೆ.ಇವರು ರಿಪ್ಪನ್ ಪೇಟೆಯ ತೀರ್ಥಹಳ್ಳಿ ರಸ್ತೆಯ ಚಾಲುಕ್ಯ ಬಾರ್ ಮುಂಭಾಗದಲ್ಲಿ ಎಗ್ ರೈಸ್ ಅಂಗಡಿ ನಡೆಸುತಿದ್ದರು.

ಮಂಗಳವಾರ ರಾತ್ರಿ 10 ಗಂಟೆಗೆ ಎಗ್ ರೈಸ್ ಅಂಗಡಿಯನ್ನು ಮುಚ್ಚಿ ಶಿವಪುರದ ತಮ್ಮ ನಿವಾಸಕ್ಕೆ ಟಿವಿಎಸ್ ಸ್ಟಾರ್ ಸಿಟಿ(KA-15 X 9927) ಬೈಕ್ ನಲ್ಲಿ ತೆರಳುತಿದ್ದಾಗ ತೀರ್ಥಹಳ್ಳಿ‌ ಕಡೆಯಿಂದ ಸಾಗರ ಕಡೆಗೆ ತೆರಳುತಿದ್ದ ಬೊಲೆರೋ ಪಿಕಪ್ (KA 17 D 9197) ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಮಂಜುನಾಥ್ ಗೆ ಗಂಭೀರ ಗಾಯಗಳಾಗಿತ್ತು ಕೂಡಲೇ ಸ್ಥಳಿಯರ ಸಹಕಾರದಿಂದ ಗಾಯಾಳುವನ್ನು ಮೆಗ್ಗಾನ್ ಗೆ ಕರೆದೊಯ್ಯಲಾಗಿತ್ತು ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.

ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.