Headlines

ಭಾರತ – ಪಾಕಿಸ್ಥಾನ ಯುದ್ದ ಹಿನ್ನಲೆ – IPL ಲೀಗ್ ರದ್ದು | ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ

ಭಾರತ – ಪಾಕಿಸ್ಥಾನ ಯುದ್ದ ಹಿನ್ನಲೆ – IPL ಲೀಗ್ ರದ್ದು | ಕ್ರಿಕೆಟ್ ಪ್ರಿಯರಿಗೆ ಶಾಕಿಂಗ್ ಸುದ್ದಿ

ಐಪಿಎಲ್‌ ವಿಶ್ವದ ಅತ್ಯಂತ ದೊಡ್ಡ ಲೀಗ್‌ ಆಗಿದೆ. ಈ ಬಾರಿ ಅಂದರೆ 18ನೇ ಸೀಸನ್ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ನಡುವೆಯೇ ಪೆಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು ಅಮಾಯಕರ ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೂಡ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಪಾಕ್‌ಗೆ ಸೂಕ್ತ ಪ್ರತ್ಯುತ್ತರ ನೀಡಿತ್ತು.

ಅಷ್ಟಕ್ಕೂ ಸುಮ್ಮನಾಗದ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿ ತೋರಿಸಲು ಮುಂದಾಯಿತು.

ಭಾರತದ 15 ಸ್ಥಳಗಳನ್ನು ಗರಿಯಾಗಿಸಿಕೊಂಡು ದಾಳಿ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ಮಾಡಲು ಪಾಕಿಸ್ತಾನ ಪ್ಲಾನ್‌ ಮಾಡಿಕೊಂಡಿದ್ದು, ಈ ಪ್ಲಾನ್‌ ಅನ್ನು ಭಾರತೀಯ ಸೇನೆ ಉಲ್ಟಾ ಮಾಡಿ ಅವರ ದೇಶಕ್ಕೆ ನುಗ್ಗಿ ಅಲ್ಲಿನ 12ಕ್ಕೂ ಹೆಚ್ಚು ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿ ಗೂಸಾ ನೀಡಿತು. ಇದರ ಬೆನ್ನಲ್ಲೇ ದೇಶದ ಪ್ರಮುಖ ಭಾಗಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕಾವಾಗಿ ಬಂದ್‌ ಮಾಡಲಾಗಿದೆ. ಇದರಿಂದ ಐಪಿಎಲ್‌ ರದ್ದಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಯಾಕೆಂದ್ರೆ, ಐಪಿಎಲ್‌ ಪಂದ್ಯಗಳನ್ನು ಆಡಲು ಒಂದೆಡೆಯಿಂದ ಮತ್ತೊಂದೆಡೆ ಪ್ರಯಾಣ ಮಾಡಲೇಬೇಕಾಗುತ್ತದೆ. ಇದೀಗ ವಿಮಾನಗಳನ್ನು ರದ್ದು ಮಾಡಿರುವ ಕಾರಣ ಪಂದ್ಯಗಳು ರದ್ದಾಗಲೂಬಹುದು ಅಥವಾ ದಿನಾಂಕ ಮುಂದೂಡಿಕೆಯಾಗಲೂಬಹುದು ಅಥವಾ ಸ್ಥಳ ಬದಲಾವಣೆಯಗಲೂಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಮೇ 11ರಂದು ನಡೆಯುವ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡದ ಸ್ಥಳವನ್ನು ಕೂಡ ಬದಲಾಯಿಸಲಾಗಿದೆ.

ಆದರೆ, ಕೆಲವೆಡೆ ವಿಮಾನ ಸೇವೆ ಬಂದ್‌ ಮಾಡಿರುವ ಕಾರಣ, ವಿಮಾನಗಳು ರದ್ದಾಗಲೂಬಹುದು ಅಥವಾ ಮುಂದೂಡಿಕೆಯಾಗಲೂಬಹದು. ಮತ್ತೊಂದೆಡೆ ಆಟಗಾರರ ರಕ್ಷಣೆ ಮಾಡುವುದು ಕೂಡ ಪ್ರಮುಖ ಕರ್ತವ್ಯವಾಗಿದೆ. ಅವರು ಬೇರೆ ದೇಶಗಳಿಂದ ಬಂದು ಇಲ್ಲಿ ಆಡುವುದರಿಂದ ಅವರ ರಕ್ಷಣೆ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಅಂದರೆ, ಪಂದ್ಯ ರದ್ದು ಮಾಡುವ ನಿರ್ಧಾರ ತೆಗೆದುಕೊಂಡರೂ ತೆಗೆದುಕೊಳ್ಳಬಹುದು ಹೇಳುವುದಕ್ಕೆ ಆಗುವುದಿಲ್ಲ.

ಐಪಿಎಲ್‌ 2025ರ ಸೀಸನ್‌ ಅಂತಿಮ ಹಂತದಲ್ಲಿದೆ. ಈಗಾಗಲೇ 57 ಪಂದ್ಯಗಳು ಮುಗಿದಿದ್ದು, ಐಪಿಎಲ್‌ ಯಾವುದೇ ತೊಂದರೆಗಳಿಲ್ಲದೆ ಮುಕ್ತಾಯವಾಗಬೇಕೆನ್ನುವುದೇ ಎಲ್ಲರ ಆಶಯವಾಗಿದೆ

ಪೆಹಲ್ಗಾಮ್‌ ದಾಳಿಗೆ ಪ್ರತಿಕಾರವಾಗಿ ‘ಆಪರೇಷನ್‌ ಸಿಂಧೂರ್’ ಕಾರ್ಯಾಚರಣೆ ಮೂಲಕ ಪಾಕ್‌ನಲ್ಲಿನ 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ಕ್ಷಿಪಣಿ ದಾಳಿ ನಡಸಿತ್ತು. ಇದರ ಬೆನ್ನಲ್ಲೇ ಇದೀಗ ಪರಿಸ್ಥಿತಿ ಕ್ಷಣ-ಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ವಿಶ್ವದ ಅತ್ಯಂತ ದೊಡ್ಡ ಲೀಗ್‌ ಆಗಿರುವ ಐಪಿಎಲ್‌ನ 18ನೇ ಆವೃತ್ತಿ ಪಂದ್ಯಗಳು ರದ್ದಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ

Leave a Reply

Your email address will not be published. Required fields are marked *