RIPPONPETE | ಮನೆಗೆ ನುಗ್ಗಿ ವಯೋವೃದ್ದರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ – ಓರ್ವನ ಬಂಧನ , ಎಂಟು ಮಂದಿ ಆರೋಪಿಗಳು ಪರಾರಿ
RIPPONPETE | ಮನೆಗೆ ನುಗ್ಗಿ ವಯೋವೃದ್ದರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ – ಓರ್ವನ ಬಂಧನ , ಎಂಟು ಮಂದಿ ಆರೋಪಿಗಳು ಪರಾರಿ
RIPPONPETE | ಮನೆಗೆ ನುಗ್ಗಿ ವಯೋವೃದ್ದರ ಮೇಲೆ ಮಾರಣಾಂತಿಕ ಹಲ್ಲೆ ಆರೋಪ – ಓರ್ವನ ಬಂಧನ , ಎಂಟು ಮಂದಿ ಆರೋಪಿಗಳು ಪರಾರಿ
ರಿಪ್ಪನ್ ಪೇಟೆ : ಮನೆಗೆ ನುಗ್ಗಿ ಎಂಬತ್ತು ವರ್ಷದ ವೃದ್ದ ಸೇರಿದಂತೆ ಮನೆಯವರ ಮಾರಣಾಂತಿಕ ಮೇಲೆ ಹಲ್ಲೆ ನಡೆಸಿ ನಗ ನಗದು ದೋಚಿಕೊಂಡು ಹೋಗಿರುವ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ BNS – 2023 ರ 189/2,191/2 , 191/3 ,329/4 ,324/4 , 352 ,115 /2 ,118 ,109 , 74 , 119/1 ,351/2 ,190 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿ ಓರ್ವನನ್ನು ಬಂಧಿಸಲಾಗಿದೆ.
ಅರಸಾಳು ಗ್ರಾಪಂ ವ್ಯಾಪ್ತಿಯ ದೂನ ಗ್ರಾಮದ ನವೀನ @ ಗುಂಡ ಬಂಧಿತ ಆರೋಪಿಯಾಗಿದ್ದಾನೆ ಘಟನೆಗೆ ಸಂಬಂಧಿಸಿದ ಇನ್ನುಳಿದ ಎಂಟು ಜನ ಆರೋಪಿಗಳು ನಾಪತ್ತೆಯಾಗಿದ್ದಾರೆ.
ದಿನಾಂಕ 04-05-2025 ರಂದು ದೂನ ಗ್ರಾಮದ ಎಂಬತ್ತು ವರ್ಷದ ಚನ್ನವೀರಪ್ಪ ಗೌಡ ಎಂಬುವವರ ಮನೆಗೆ ನುಗ್ಗಿದ ನವೀನ್ ಗೌಡ ಹಾಗೂ ಇನ್ನುಳಿದ ಎಂಟು ಜನ ಆರೋಪಿಗಳು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಹಾಳುಗೆಡವಿದಲ್ಲದೇ ನಗ ನಗದನ್ನು ದೋಚಲು ಮುಂದಾದಾಗ ತಪ್ಪಿಸಲು ಹೋದ ಮನೆಯಲ್ಲಿದ್ದ ವಯೋವೃದರಾದ ಚನ್ನವೀರಪ್ಪ ಗೌಡ , ಅವರ ಪತ್ನಿ ವಿಶಾಲಕ್ಷಿ ಹಾಗೂ ಅವರ ಸೊಸೆ ಭಾಗ್ಯ ಮತ್ತು ಉಮೇಶ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿ ಮನೆಯಲ್ಲಿದ್ದ ನಗ ನಗದನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಈ ಪ್ರಕರಣದ ಅಡಿಯಲ್ಲಿ ನವೀನ@ ಗುಂಡ ಎಂಬಾತನನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿ ಶಿವಮೊಗ್ಗದ ಜೈಲಿಗೆ ಕಳುಹಿಸಲಾಗಿದೆ.ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.