ಗುಡ್ ಶೆಫರ್ಡ್ ಚರ್ಚ್ ವಾರ್ಷಿಕೋತ್ಸವ – ಸರ್ವಧರ್ಮ ಸೇವಾ ಟ್ರಸ್ಟ್ ವತಿಯಿಂದ ಪಾನೀಯ ವಿತರಣೆ
ರಿಪ್ಪನ್ ಪೇಟೆ : ಇಲ್ಲಿನ ಗುಡ್ ಶೆಫರ್ಡ್ ಚರ್ಚ್ ನ ವಾರ್ಷಿಕೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಪಟ್ಟಣದ ಸರ್ವಧರ್ಮ ಸೇವಾ ಸಂಸ್ಥೆ ವತಿಯಿಂದ ಭಕ್ತಾಧಿಗಳಿಗೆ ಪಾನೀಯ ವಿತರಿಸುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ.

ಪಟ್ಟಣದ ಗುಡ್ ಶೆಫರ್ಡ್ ಚರ್ಚ್ ನಲ್ಲಿ ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತಿತ್ತು ಆದರೆ ಈ ವರ್ಷ ಪೋಪ್ ನಿಧನದ ಹಿನ್ನಲೆಯಲ್ಲಿ ಸರಳವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ಪಾಲ್ಗೊಂಡಿದ್ದವರಿಗೆ ಪಟ್ಟಣದ ಸರ್ವಧರ್ಮ ಸೇವಾ ಸಂಸ್ಥೆಯವರು ತಂಪುಪಾನಿಯವನ್ನು ಹಂಚಿ ಸೌಹಾರ್ದತೆ ಮೆರೆದರು.
ಈ ಸಂಧರ್ಭದಲ್ಲಿ ಸರ್ವಧರ್ಮ ಸೇವಾ ಸಂಸ್ಥೆಯ ಅಧ್ಯಕ್ಷ ಅಪ್ಜಲ್ ಬ್ಯಾರಿ , ಸದಸ್ಯರಾದ ಪಿ.ರಮೇಶ್ ,ಸಂತೋಷ್ ಅಶ್ರಿತ , ವಿಜಯ್ ಮಳವಳ್ಳಿ, ಸರ್ವಧರ್ಮ ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾದ ಅಜ್ಮಾಲ್ ಹುಸೈನ್,ಉಪಾಧ್ಯಕ್ಷರಾದ ಅಫ್ನನ್,ಪೈಜಲ್ ಬ್ಯಾರಿ ಸದಸ್ಯರುಗಳಾದ ಝಿಯಾದ್, ರೋಬಿನ್, ರಾಹಿಲ್ ಚಾಲಿ.ಸುಹೈಲ್ ಬ್ಯಾರಿ, ಝಿಧಾನ್, ಜಾಬಿರ್, ಅರ್ಬಾಜ್, ಸವಾದ್ ಇನ್ನಿತರ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.

