w
Headlines
Home » ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

GridArt 20250422 163443487.jpg

ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ;-ಇಲ್ಲಿನ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ನೆರವೇರಿತು.

ಇಂದು ಅಪರಾಹ್ನ 12. ಗಂಟೆ 45 ನಿಮಿಷದಲ್ಲಿ ಸಿದ್ದಿವಿನಾಯಕ ಸ್ವಾಮಿ ರಥವನ್ನೇರುತ್ತಿದ್ದಂತೆ ಭಕ್ತರ ಜಯಘೋಷಣೆ ಮುಗಿಲು ಮುಟ್ಟಿತು.

ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಮತ್ತು ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಮಹಾಸ್ವಾಮಿಜಿ ಮತ್ತು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಧರ್ಮದರ್ಶಿ ಸಮಿತಿ ಆಧ್ಯಕ್ಷ ಈಶ್ವರಶೆಟ್ಟಿ ಇವರು ಹಾಜರಿದ್ದು ರಥೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವವು ಜನರಲ್ಲಿನ ಶ್ರದ್ದಾ ಭಕ್ತಿಯ ಪರಾಕಾಷ್ಟತೆಯೊಂದಿಗೆ ಬೇಡಿದ ವರ ಕರಣಿಸುವ ವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವರುಗಳ ದರ್ಶನಕ್ಕೆ ಬಿಸಿಲು ಲೆಕ್ಕಿಸದೇ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಬಾಳೆಹಣ್ಣು  ಉತ್ತುತ್ತಿ ಯನ್ನು ರಥದತ್ತ ಎಸೆಯುತ್ತಾ ಜಯಘೋಷಣೆ ಕೂಗಿದರು.

ರಥೋತ್ಸವವು ದೇವಸ್ಥಾನದಿಂದ ಹೊರಟು ವಿನಾಯಕ ವೃತ್ತದವರೆ ಚಲಿಸಿ ನಂತರ ದೇವಸ್ಥಾನದ ಬಳಿ ವಾಪಾಸ್ಸು ತರುವುದರೊಂದಿಗೆ ನೆಲೆ ನಿಂತಿತು.

ಶಿವಮೊಗ್ಗದ ಅಗಮ ಪ್ರವೀಣ ವಸಂತಭಟ್ ಮತ್ತು ವೃಂದ ಹಾಗೂ ರಿಪ್ಪನ್‌ಪೇಟೆ ಗಂಪತಿ ದೇವಸ್ಥಾನದ ಪ್ರಧಾನ ಆರ್ಚಕರಾದ ಚಂದ್ರಶೇಖರಭಟ್, ಗುರುರಾಜಭಟ್, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿಗಳು ಸೇವಾಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಈ ರಥೋತ್ಸವದಲ್ಲಿ ಠೇವಣಿ ಸಂಗ್ರಹಕಾರರು ಮತ್ತು ವಿವಿಧ ಸಂಘ ಸಂಸ್ಥೆಯವರು ಮಜ್ಜಿಗೆ ಸೇವೆ ಮತ್ತು ನೀರಿನ ಸೌಲಭ್ಯವನ್ನು ನೀಡಿದರು.ನಂತರ ಸಾಮೂಹಿಕ ಅನ್ನ ಸಂತರ್ಪಣೆ ನೆರವೇರಿತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.