ಕಾಶ್ಮೀರ ಉಗ್ರರ ದಾಳಿ – ಮೃತ ಮಂಜುನಾಥ್ ಮನೆಗೆ ಸ್ಪೀಕರ್ ಯು ಟಿ ಖಾದರ್ ಭೇಟಿ , ಸಾಂತ್ವಾನ

ಶಿವಮೊಗ್ಗ: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಜುನಾಥ ಅವರ ಕುಟುಂಬಕ್ಕೆ ಎಷ್ಟೇ ಸಾಂತ್ವನ ಹೇಳಿದರೂ ಕಡಿಮೆ ಎಂದು ಶಿವಮೊಗ್ಗದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಜುನಾಥ್ ರಾವ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ನಿನ್ನೆಯೇ ಬರಬೇಕಾಗಿತ್ತು. ಬೇರೊಂದು ಕಾರ್ಯಕ್ರಮ ಇದ್ದದ್ದರಿಂದ ಇಂದು ಇಲ್ಲಿಗೆ ಬಂದಿದ್ದೇನೆ. ಎಂದರು.
ಅವರ ನೋವು ನಮಗೆಲ್ಲ ಗೊತ್ತಿದೆ. ಅವರ ಜೊತೆ ದೇಶವೇ ಇದೆ. ಇಂತಹ ಘಟನೆ ಯಾರಿಗೂ ಆಗಬಾರದು. ಅ ಸಂದರ್ಭದಲ್ಲಿ ಸಹೋದರಿ ಪಲ್ಲವಿ ಧೈರ್ಯ ತೋರಿದ್ದಾರೆ. ಇಡೀ ದೇಶದ ಜನತೆ ಇವತ್ತು ಕೇಂದ್ರದ ಜೊತೆ ಇದ್ದಾರೆ. ದೇಶವನ್ನು ದುರ್ಬಲಗೊಳಿಸುವ ಕೆಲಸವನ್ನು ಭಯೋತ್ಪಾದಕರು ಮಾಡ್ತಿದ್ದಾರೆ. ಅವರನ್ನು ಮಟ್ಟ ಹಾಕುವ ಕೆಲಸವನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೇಂದ್ರದ ಜೊತೆ ಎಲ್ಲರೂ ಇರಬೇಕು. ರಾಜಕೀಯವನ್ನು ಬದಿಗಿಟ್ಟು, ಎಲ್ಲರೂ ಜೊತೆಗಿರಬೇಕು. ನೈತಿಕವಾಗಿ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ಸರ್ಕಾರ ಪರಿಹಾರ ಘೋಷಿಸಿದ್ದು ಇದರ ಬಗ್ಗೆ ಪುನರ್ ಪರಿಶೀಲಿಸುವುದಾಗಿ ಹೇಳಿದರು.