ಮುಟ್ಟಿನ ಸಮಸ್ಯೆ ಬಗ್ಗೆ ಸಂಕೋಚಪಡಬೇಡಿ – ಖ್ಯಾತ ಪ್ರಸೂತಿ ತಜ್ಣೆ ಡಾ. ರಕ್ಷಾ ರಾವ್
ಶಿವಮೊಗ್ಗ :- ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ ಮತ್ತು ಅದರಲ್ಲಿಯೂ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆ ಗಳಿದ್ದಾಗ ಬಹುಪಾಲು ಮಹಿಳೆಯರು ಯಾರೊಂದಿಗೂ ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ. ಆದ್ದರಿಂದ ಈ ಸಂಕೋಚ ಭಾವನೆಯಿಂದ ಹೊರಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನಗರದ ಖ್ಯಾತ ಪ್ರಸೂತಿ ತಜ್ಣೆ ಡಾ|! ರಕ್ಷಾ ರಾವ್ ತಿಳಿಸಿದರು.
ಕಟೀಲ್‌ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸಟ್ರಸ್ಟ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿ ಯೇಷನ್ ಆಫ್‌ಇಂಡಿಯಾ ಶಿವಮೊಗ್ಗ, ಕಾಲೇಜಿನ ಸಮಾಜ ಕಾರ್ಯ ವಿಭಾಗ, ಯುವರೆಡ್ ಕ್ರಾಸ್ ಘಟಕ ಹಾಗೂ ಐ ಕ್ಯೂ ಎಸಿ ವಿಭಾಗದ ಸಹಯೋ ಗದಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ಸಖಿ ಆರೋಗ್ಯ ಹೆಣ್ಣು ಮಕ್ಕಳ ಆರೋಗ್ಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ನಮ್ಮ ದೇಹವನ್ನು ಗೌರವಿಸಬೇಕು, ನಮ್ಮದೇಹದಲ್ಲಿ ಆಗುವ ಬದಲಾವಣೆಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಿಳುವಳಿಕೆಯ ಕೊರತೆಯಿದ್ದರೆ ಕೆಲವು ಅಭ್ಯಾಸ ಗಳನ್ನು ಕುರುಡಾಗಿ ಅನುಸರಿಸುತ್ತೇವೆ ಮತ್ತು ಆ ತಪ್ಪು ಕಲ್ಪನೆಗಳನ್ನು ನಂಬುತ್ತೇವೆ. ಯುವತಿಯರಿಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಅತ್ಯಂತ ಅವಶ್ಯಕ ವಾಗಿದೆ ಎಂದರು.
ಮುಟ್ಟಿನ ನೈರ್ಮಲ್ಯ, ಮುಟ್ಟಿನ ಚಕ್ರ ಮತ್ತು ಅದರ ಪ್ರಕ್ರಿಯೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು, ಮುಟ್ಟಿನಕಿಟ್ ಬ್ಯಾಗ್ ಅಲ್ಲಿ ಇಡಬೇಕಾದ ಅಗತ್ಯ ವಸ್ತುಗಳು, ಆರೋಗ್ಯಕರವಾಗಿ ಮುಟ್ಟಿನ ಚಕ್ರವನ್ನು ನಿರ್ವಹಿಸುವ ವಿಧಾನ ಗಳು. ಪಿಸಿಓಡಿ ಸಮಸ್ಯೆ, ಗರ್ಭಕೋಶದ ಕ್ಯಾನ್ಸರ್, ದೇಹದ ಬೊಜ್ಜು ಮತ್ತು ಮಹಿಳೆಯರು ತಮ್ಮನ್ನು ತಾವು ಆರೋಗ್ಯವಾಗಿಡಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿದರು.
ಎಫ್‌ಪಿಎಐ ಅಧ್ಯಕ್ಷ ಡಾ.ಆರ್ ಪಿ ಸಾತ್ವಿಕ್, ಪ್ರಾಂಶುಪಾಲೆ ಡಾ. ಸಂಧ್ಯಾಕಾವೇರಿ ಮಾತನಾಡಿದರು. ಉಪನ್ಯಾಸಕಿ ನಾನ್ಸಿ ಲವೀನಾ ಪಿಂಟೋ ಮತ್ತುಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜ್ಯೋತಿ ಸ್ವಾಗತಿಸಿ, ಪೂರ್ಣಿಮಾ ವಂದಿಸಿದರು. ಮಂಜುಳ ನಿರೂಪಿಸಿದರು.