POSTMANNEWS

ನೈಜ ಸುದ್ದಿ ನೇರ ಬಿತ್ತರ..

ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ

ಬೆಲ್ಲ-ಅಕ್ಕಿ ಬಾಳೆಹಣ್ಣು ಗೋವಿಗೆ ನೀಡಿ ಕಾಯಕಯೋಗಿ ಶತಾಯಿಷಿ ಶ್ರೀಗಳ ಜನ್ಮದಿನಾಚರಣೆ

ರಿಪ್ಪನ್‌ಪೇಟೆ;-ಕಾಯಕಯೋಗಿ ತ್ರಿವಿಧ ದಾಸೋಹಿ ಶತಾಯಿಷಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 118 ನೇ ಜನ್ಮ ದಿನಾಚರಣೆಯನ್ನು  ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾರ್ವಜನಿಕರು ರೋಟರಿ ಕ್ಲಬ್ ಸದಸ್ಯರು ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು ವಿಶೇಷವಾಗಿ ಜನಮನ ಸೆಳೆಯಿತು.

ಜಿ.ಎಸ್.ಬಿ.ಮತ್ತು ಬ್ರಾಹ್ಮಣ ಸಮಾಜ ಹಾಗೂ ರೋಟರಿ ಕ್ಲಬ್ ಸಾರ್ವಜನಿಕರು  ಮತ್ತು ಶ್ರೀಗಳ ಅಭಿಮಾನಿ ಬಳಗದವರು ಇಲ್ಲಿನ ವಿನಾಯಕ ವೃತ್ತದಲ್ಲಿ “ಲಿಂ.ಡಾ.ಶಿವಕುಮಾರ ಮಹಾಸ್ವಾಮಿಜಿ’’ಗಳ ಭಾವಚಿತ್ರವನ್ನಿಟ್ಟು  ಪೂಜೆಸಿ ಪುಷ್ಪಾ ವೃಷ್ಟಿ  ಸಮರ್ಪಿಸುವ ಮೂಲಕ ನಡಿನಮನ ಸಲ್ಲಿಸಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು  ನೀಡಿ ಶುಭಕೋರಿದರು.

ಜಿ.ಎಸ್.ಬಿ.ಸಮಾಜದ ಆಧ್ಯಕ್ಷ ಗಣೇಶಕಾಮತ್, ಪಿಎಸ್‌ಐ ಪ್ರವೀಣ್ ಎಸ್.ಪಿ., ಗಣೇಶ ಪ್ರಸಾದ್ ಹೋಟಲ್ ಪ್ರೋ.ಸುದೀಂದ್ರ ಎಸ್.ಹೆಬ್ಬಾರ್,ಜೆ.ರಾಧಾಕೃಷ್ಣ, ಸಬಾಸ್ಟಿನ್ ಮಾಥ್ಯೂಸ್, ಹರೀಶ್‌ಪ್ರಭು, ರಾಮಚಂದ್ರ, ರವೀಂದ್ರ ಬಲ್ಲಾಳ್, ದೇವೇಂದ್ರಪ್ಪಗೌಡ ನೆವಟೂರು, ನಟರಾಜ್  ಶಿವಪುರ, ಪಿ. ಸುದೀರ್ ಬಸಪ್ಪ ಬೆಳಂದೂರು, ಜೆ.ಜಿ.ಸದಾನಂದ ಜಂಬಳ್ಳಿ, ಹಾಜರಿದ್ದರು.

About The Author

Leave a Reply

Your email address will not be published. Required fields are marked *