Ripponpete | ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿ ವಶಕ್ಕೆ..!
ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದಲ್ಲಿ ಭಾನುವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ಹೊಸನಗರ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ,ಸಂತೋಷ್ ಕೊರವರ ,ರಾಮಚಂದ್ರಪ್ಪ ಹಾಗೂ ಮಧುಸೂಧನ್ ಇದ್ದರು.