ಸಂಘಟಿತ ಹೋರಾಟಕ್ಕೆ ಸಂದ ಜಯ – ವೀರೇಶ್ ಆಲುವಳ್ಳಿ
ರಿಪ್ಪನ್‌ಪೇಟೆ : ಕಳೆದ ಹಲವು ತಿಂಗಳಿಂದ ಮಲೆನಾಡಿನ ರೈತರನ್ನು ಕೆಂಗಡಿಸಿದ್ದ ಕಾಡಾನೆಗಳನ್ನು ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ನಡೆಸಿದ ಸಂಘಟಿತ ಹೋರಾಟದಿಂದ ಕಾಡಾನೆಗಳ ದಾಳಿಯಿಂದ ಅಲ್ಪ ಮುಕ್ತಿ ದೊರಕಿದಂತಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಹಾಗೂ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ವೀರೇಶ್ ಆಲುವಳ್ಳಿ ಹೇಳಿದರು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ಮಾತನಾಡಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಈ ಭಾಗದ ರೈತ ಸಂಘಟನೆಗಳೊಂದಿಗೆ ಕಾಡಾನೆ ದಾಳಿಯಿಂದ ಮುಕ್ತಿ ದೊರಕಿಸುವಂತೆ ಆರಣ್ಯ ಸಂರಕ್ಷಣಾಧಿಕಾರಿಗಳು ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಈಗ ಕಾಡಾನೆಗಳನ್ನು ಸ್ಥಳಾಂತರಿಸಲಾಗಿದ್ದು ಈ ಹೋರಾಟದಲ್ಲಿ ಭಾಗವಹಿಸಿದ ರೈತರಿಗೆ ಮತ್ತು ಕಾರ್ಯಾಚರಣೆ ನಡೆಸಿ ಸ್ಥಳಾಂತರಗೊಳಿಸಿದ ಅರಣ್ಯ ಇಲಾಖೆ ಆಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಹಲವು ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದಾಗಿ ರೈತರ ಭತ್ತ ಕಬ್ಬು ಆಡಿಕೆ ಬಾಳೆ ಬೆಳೆಯನ್ನು ತುಳಿದು ತಿಂದು ದ್ವಂಸಗೊಳಿಸಿದ್ದು ಅಲ್ಲದೆ ಹಗಲು ರಾತ್ರಿ ರೈತರು ಹೊಲಗದ್ದೆಗಳಿಗೆ ಹೋಗುವುದು ಕಷ್ಟಕರವಾಗಿ ಭಯದಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿತು. ಅಲ್ಲದೆ ಸೊಪ್ಪು ತರಲು ಹೋದ ವ್ಯಕ್ತಿಯನ್ನು ತಳಿದು ಸಾಯಿಸಿದ ಪ್ರಸಂಗವೂ ನಡೆದಿದ್ದು ಇದರಿಂದಾಗಿ ಮಲೆನಾಡಿನ ಜನತೆ ಹೈರಾಣರಾಗಿದ್ದರು. ಈ ಕುರಿತು ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಜನವರಿ 24 ರಂದು ರೈತನಾಗರೀಕರೊಂದಿಗೆ ಶಿವಮೊಗ್ಗ ಜಿಲ್ಲಾ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿಗಳು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಕಾಡಾನೆಗಳ ಹಿಂಡುಗಳನ್ನು ಈ ಕೂಡಲೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ ಬೆನ್ನಲೇ ಕಾಡಾನೆಗಳ ಗುಂಪು ಹಿಂತಿರುಗಿರುತ್ತವೆ ಇದರಿಂದ ರೈತಾಪಿ ವರ್ಗ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಾರ್ವಜನಿಕರು ನಿಟ್ಟೂಸಿರು ಬಿಡುವಂತಾಗಿದೆ ಎಂದು ಹೇಳಿದರು
ಈ ರೈತರ ಹೋರಾಟದಲ್ಲಿ ಭಾಗವಹಿಸಿದ ಶಿವಮೊಗ್ಗ ಶಾಸಕ ಚನ್ನಬಸಪ್ಪ,ಆರಗಜ್ಞಾನೇಂದ್ರ, ಡಿ.ಎಸ್.ಅರುಣ್ ಮಾಜಿ ಶಾಸಕರಾದ ಬಿ.ಸ್ವಾಮಿರಾವ್.ಕೆ.ಜಿ.ಕುಮಾರಸ್ವಾಮಿ, ಮತ್ತು ರೈತರಿಗೆ ಮತ್ತು ಅರಣ್ಯ ಇಲಾಖೆ ಆಧಿಕಾರಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಕಾಡಾನೆಗಳು ಬಾರದಂತೆ ಕಾಡಿನ ದಾರಿಯಲ್ಲಿ ಅಡ್ಡಲಾಗಿ ಬೃಹತ್ ಗಾತ್ರದ ಇಪಿಟಿ ಟ್ರಂಚ್ ತೆಗೆಯುವ ಮೂಲಕ ರಸ್ತೆ ಬಂದ್ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಖಂಡರಾದ ಆರ್.ಟಿ.ಗೋಪಾಲ, ತಾಲ್ಲೂಕ್ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್, ಯುವ ಮೋರ್ಚಾ ಕಾರ್ಯದರ್ಶಿ ಮುರುಳಿಕೆರೆಹಳ್ಳಿ,ಷಣ್ಮುಖಪ್ಪ,ದಿವಾಕರ್ ಹಾಗೂ ಇನ್ನಿತರರು ಹಾಜರಿದ್ದರು.


