ಅಬಾಕಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ
ರಿಪ್ಪನ್‌ಪೇಟೆ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಟ್ಟಣದ “ಐಡಿಯಲ್ ಪ್ಲೇ ಅಬಾಕಸ್ ” ಶಾಖೆಯ 17 ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅನೇಕ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
12- 01-2025 ರಂದು ಬೆಂಗಳೂರಿನ ವೈಟ್ ಫೆದರ್ ಹಾಲ್ ನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಕಾಂಪಿಟೇಶನ್ ನಲ್ಲಿ 15 ರಾಜ್ಯಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ರಿಪ್ಪನ್ ಪೇಟೆಯ ‘ಐಡಿಯಲ್ ಪ್ಲೇ ಅಬಾಕಸ್ ” ಶಾಖೆಯ 17 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ಐಡಿಯಲ್ ಪ್ಲೇ ಅಬಾಕಸ್ ಸಂಸ್ಥೆಯ ವಿದ್ಯಾರ್ಥಿ ರಿಷಿತ ‘ಚಾಂಪಿಯನ್ ಆಫ್ ಚಾಂಪಿಯನ್’ ಪ್ರಶಸ್ತಿ ಪಡೆದಿದ್ದಾಳೆ.
– ಬಹುಮಾನ ಪಡೆದ ವಿದ್ಯಾರ್ಥಿಗಳು –
ಪ್ರಥಮ ಬಹುಮಾನ :
ಕುಶಿಲ್, ಮನ್ವಿತ್, ಪೌರ್ಣಿಮ,
ದ್ವಿತೀಯ ಬಹುಮಾನ
ರಾಶಿಕ್ ಕೆ ಆರ್ , ಆಲಿಜ , ಸೃಜನ್ ಜಿ , ಇಸಿಯಾನ್ , ಮಹಮದ್ ಅಪಜಲ್ , ಸಮ್ಮಿತ , ಆರುಶ್ ಎ , ಮೈನಾ ಡಿ ಆ ರ್ , ಸಹಲ ಮಾಷಿತ,
ತೃತೀಯ ಬಹುಮಾನ :
ಪಿದಾಮರಿಯಂ , ಲಾಲಿತ್ಯ ಆರ್ , ನಿಹಾರ್ ಜೆ ಪಾಟೀಲ್ , ಹನ್ಸಿನಿ ಕೆ ಆರ್
ಅಭೂತಪೂರ್ವ ಸಾಧನೆಗೈಯುವ ಮೂಲಕ ರಿಪ್ಪನ್ ಪೇಟೆ ಗೆ ಹಾಗೂ ಸಂಸ್ಥೆಗೆ ಕೀರ್ತಿಯನ್ನು ತಂದುಕೊಟ್ಟ ವಿದ್ಯಾರ್ಥಿಗಳಿಗೆ ಐಡಿಯಲ್ ಪ್ಲೇ ಅಬಾಕಸ್ ಫ್ರಾಂಚೈಸಿಯ ಮುಖ್ಯಸ್ಥರಾದ ವಿದ್ಯಾ ಮಂಜುನಾಥ್ ಹಾಗೂ ಸ್ಥಳೀಯ ತರಬೇತುದಾರರಾದ ಸಂತೋಷ್ ಕುಮಾರ್ ಅಭಿನಂದಿಸಿದ್ದಾರೆ.