ಸಮಾಜದ ಬೆಳೆವಣಿಗೆಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ
ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಲಿಂಗಬೇದ ನಿರ್ಮೂಲನೆ , ಸಮಾನತೆಯ ಹಕ್ಕುಗಳನ್ನು ಕೊಡುಗೆ ನೀಡಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡರು ಎಂದು ಹೇಳಿದರು.
ಕ್ವೀನ್ ಬೀ ಕ್ಲಬ್ ಆಯೋಜಿಸಿದ್ದ ಗಣರಾಜ್ಯೋತ್ಸವ ಹಾಗೂ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸಂಘಟಿತರಾಗುತ್ತಿದ್ದಾರೆ. ಈಗಿನ ಮಹಿಳೆಯರು ಜಾಲತಾಣದ ಬಲೆಗೆ ಮಾರಿ ಹೋಗಿದ್ದಾರೆ ಹಿಂದಿನಿಂದ ಬಂದಂಥ ಮನೆಯಲ್ಲೇ ಕುಟ್ಟುವುದು ಬಿಸುವುದು ಇನ್ನು ಹಲವಾರು ರೀತಿಯ ಗೃಹ ಕೈಗಾರಿಕೆಯಲ್ಲಿ ತಿನ್ನುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸುತಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ಉದಾಹರಣೆಯಾಗಿ ಕುಟ್ಟುವುದು, ಬಿಸುವುದು, ಬಳೆ ತೋಡಿಸುದರ ಉದಾಹರಣೆಯಾದರು.ಈ ಸಮಾಜದ ಬೆಳೆವಣಿಗೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿದ್ದು ಎಂದರು.
ಕ್ವೀನ್ ಬೀ ಕ್ಲಬ್ ಅಧ್ಯಕ್ಷರಾದ ಅನ್ನಪೂರ್ಣ ಆರ್. ಶೆಟ್ಟರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದ ಪ್ರತಿ ಪ್ರಜೆಗೂ ಮೂಲಭೂತ ಹಕ್ಕು ಮತ್ತು ಪ್ರಜಾಪ್ರಭುತ್ವ ಒದಗಿಸಿದ ಮಹತ್ವದ ಗಳಿಗೆಯನ್ನು ಸಂಭ್ರಮಿಸುವ ಸುದಿನವಿದು. ಹಿಂತಹ ಮಹತ್ತರ ಕೊಡುಗೆಯನ್ನು ನೀಡಿದ ಅಂಬೇಡ್ಕರ ಅವರನ್ನು ನೆನೆಯುವ ಯುವ ದಿನ ಎಂದರು.
ಕಾರ್ಯಕ್ರಮದಲ್ಲಿ ಹಳ್ಳಿಸೋಗಡಿನ, ದಿನ ನಿತ್ಯದ ಕೆಲಸವಾದ ಬಿಸುವುದು, ಕುಟ್ಟುವುದು, ಸಂಕ್ರಾಂತಿಯ ಆಚರಣೆ ಪದ್ಧತಿ, ಬಲೆ ಇಡುವುದು ಹಾಗೂ ಶಾವಿಗೆ ಹೊಸಿಯುವುದಂತಹ ಮನೆಯಲ್ಲಿಯೇ ಮಾಡುತಿದ್ದ ಪದಾರ್ಥಗಳ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಮಾಡಲಾಯಿತು
ಈ ಸಂಧರ್ಭದಲ್ಲಿ ಕ್ವೀನ್ ಬೀ ಕ್ಲಬನ ಉಪಾಧ್ಯಕ್ಷರಾದ ಶ್ರೀಮತಿ ಜಯಶೀಲಾ ಮಾಮ್ಲೆಪಟ್ಟಣಶೆಟ್ಟರ, ಖಜಾಂಚಿ ಲತಾ ಕೊಲ್ಲಾವರ ಹಾಗೂ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿವಲೀಲಾ ಮಾಮ್ಲೆಪಟ್ಟಣಶೆಟ್ಟರ, ಶೋಭಾ ಮಾಮ್ಲೆಪಟ್ಟಣಶೆಟ್ಟರ ಮತ್ತು ನಿಲಾಂಬಿಕಾ ಮಾಮ್ಲೆಪಟ್ಟಣಶೆಟ್ಟರ ಪ್ರಾರ್ಥಿಸಿದರು. ಜ್ಯೋತಿ ಸಂಕಣ್ಣವರ ಸ್ವಾಗತಿಸಿದರು. ನಂದಾ ಕೂಲಿ ವಂದಿಸಿದರು. ಸಹನಾ ಮಾಮ್ಲೆಪಟ್ಟಣಶೆಟ್ಟರ ನಿರೂಪಿಸಿದರು.
ವರದಿ : ನಿಂಗರಾಜ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ

