RIPPONPETE | ಬೋರ್ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ – ರಸ್ತೆ ಹಾಗೂ ಮನೆಗಳಿಗೆ ಡ್ಯಾಮೇಜ್ ಆರೋಪ
ನೀರಿಗಾಗಿ ಕಾದು ಕುಳಿತಿದ್ರು. ಎಷ್ಟೊತ್ತಿಗೆ ಅಂತಾ ಕಾದುಕುಳಿತ್ತಿದ್ದರಿಗೆ ಶಾಕ್ ಅಗಿದ್ದು ಏಕಾಏಕಿ ಬೋರ್ ವೇಲ್ ಕೊರೆಯೋ ಜಾಗದ ಸುತ್ತ ಕಾಣಿಸಿಕೊಂಡ ಬಿರುಕು. ಕೆಲವ್ರು ಶಬ್ದ ಬಂತು ಅಂತಿದ್ರೆ ಇನ್ನೂ ಕೆಲವ್ರು ಇಲ್ಲ ಅಂತಿದ್ದಾರೆ. ಅದ್ರೂ ಡ್ಯಾಮೇಜ್ ಗೆ ಅತಂಕವಂತೂ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮಸ್ಥರಿಗೆ ಮೂಡಿದೆ.
ಹೌದು ಕೆರೆಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆ ಮುಂದಿನ ಸ್ಥಳದಲ್ಲಿ ಬೋರ್ ವೇಲ್ ಕೊರೆಸಲಾಗ್ತಿತ್ತು.ನುರಿತ ಆಪರೇಟರ್ ನ ಕೊರತೆಯಿಂದ ಭೂಮಿಯೊಳಗೆ ಏರ್ ಪ್ರೆಸರ್ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.ಈ ಸಂಧರ್ಭದಲ್ಲಿ ಏಕಾಏಕಿ ಬಿರುಕು ಕಾಣಿಸಿದೆ. ಬೋರ್ ವೇಲ್ ಕೊರೆಯೋವಾಗ ಶಬ್ದ ಬಂತು ಎಂದು ಕೆಲವರು ಹೇಳ್ತಿದ್ದಾರೆ.ಇನ್ನೂ ಭೂಮಿಯಲ್ಲಿ ಬಿರುಕು ಕಂಡು ಬಂದಿರುವುದು ಜನರಲ್ಲಿ ಅತಂಕ ತಂದಿದೆ. ಇದಲ್ಲದೆ ಸರ್ಕಾರಿ ರಸ್ತೆಗಳು ಹಾಗೂ ಸುತ್ತಮುತ್ತಲಿನ ಬಡವರ ಮನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟಿದೆ. ಗೋಡೆ ಸೇರಿದಂತೆ ಹಲವೆಡೆ ಬಿರುಕು ಕಾಣಿಸಿಕೊಂಡಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಗೋಲ್ಡ್ ವಿಂಗ್ಸ್ ಸಂಸ್ಥೆಯ ವಾಹನಗಳನ್ನು ಜಪ್ತಿ ಮಾಡಿ ಸ್ಟೇಷನ್ ಗೆ ಕರೆತಂದಿದ್ದಾರೆ.
ಒಟ್ಟಾರೆ ನೀರಿಗಾಗಿ ಬೋರ್ ಕೊರೆಸಿದವರಿಗೇ ಶಾಕ್ ಎದುರಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಭೂಮಿ ಬಿರುಕು ಬಿಡಲು ಅಸಲಿ ಕಾರಣವನ್ನು ಪತ್ತೆ ಹಚ್ಚಿ ಜನರ ಆತಂಕವನ್ನು ದೂರ ಮಾಡಬೇಕಿದೆ.
ರಾಜೀ ಪಂಚಾಯ್ತಿ :
ಬಲ್ಲ ಮೂಲಗಳ ಪ್ರಕಾರ ನುರಿತ ತಂತ್ರಜ್ಞರಿಲ್ಲದೇ ಬೇಕಾಬಿಟ್ಟಿ ಬೋರ್ ವೆಲ್ ಕೊರೆದ ಗೋಲ್ಡ್ ವಿಂಗ್ಸ್ ಬೋರ್ವೆಲ್ ಸಂಸ್ಥೆಯವರು ಬಿರುಕು ಬಿಟ್ಟ ಮನೆಯವರಿಗೆ ಪರಿಹಾರ ಕೊಡುತ್ತೇವೆ ಎಂದು ನಂಬಿಸಿ ಮೂರು ಕಾಸಿಗೆ ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗುತಿದ್ದರೂ ಈ ತೀರ್ಮಾನ ಬಿರುಕು ಬಿಟ್ಟ ಮನೆಯವರಿಗೆ ಒಪ್ಪಿಗೆ ಇಲ್ಲ ಯಾಕೆಂದರೆ ಮುಂದಿನ ತಿಂಗಳು ಮದುವೆ ನಿಶ್ಚಯವಾಗಿ ಮನೆಯನ್ನು 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ನವೀಕರಣ ಮಾಡಿದವರಿಗೆ ಕೇವಲ 20 ಸಾವಿರ ರೂ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಮ್ಮ ಅಳಲನ್ನು ಮಾದ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನೂ ಇದೇ ಸ್ಥಳದಲ್ಲಿ ಪಿಎಂಜಿಎಸ್ ವೈ ಯೋಜನೆಯಡಿಯಲ್ಲಿ ನಿರ್ಮಿಸಿದ್ದ ಸುಸಜ್ಜಿತ ರಸ್ತೆ ಈ ಘಟನೆಯಿಂದ ಬಿರುಕು ಬಿಟ್ಟಿದೆ ಈ ಬಗ್ಗೆ ದೂರು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರಿಪ್ಪನ್‌ಪೇಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ.
ಒಟ್ಟಾರೆಯಾಗಿ ಬೋರ್ ವೆಲ್ ಏಜೆನ್ಸಿಯವರ ನಿರ್ಲಕ್ಷ್ಯಕ್ಕೆ ಬಡವರ ಮನೆಗಳು ಬಿರುಕು ಬಿಟ್ಟು ,ಸುಸಜ್ಜಿತ ರಸ್ತೆಗಳು ಹಾನಿಯಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.