Headlines

ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ದಿನ ಎರಡು ಮನೆಯಲ್ಲಿ ಸರಣಿ ಕಳ್ಳತನವಾಗಿರುವ (Theft Case) ಘಟನೆ ಜರುಗಿದೆ. ಘಟನೆ 1 ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಳಲೆ ಸಮೀಪದ ಕಗ್ಗಲಿ  ಗ್ರಾಮದ ನ.30 ರಂದು ಅಶೋಕ್ ಎನ್ ಎಂಬುವವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 24 ಗ್ರಾಂ ಬಂಗಾರ, 15 ಸಾವಿರ ನಗದು, 85 ಗ್ರಾಂ ಬೆಳ್ಳಿ ಅನ್ನು…

Read More

ಹೊಸನಗರ -SSLC ವಿಧ್ಯಾರ್ಥಿ ಶಾಲೆಯಿಂದ ನಾಪತ್ತೆ , ದೂರು ದಾಖಲು

SSLC ವಿಧ್ಯಾರ್ಥಿ ಶಾಲೆಯಿಂದ ನಾಪತ್ತೆ – ದೂರು ದಾಖಲು ಹೊಸನಗರ ತಾಲೂಕು ಸೊನಲೆ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಎನ್ ಆರ್ ಮನೋಜ ಅಲಿಯಾಸ್ ಮನು ಸೋಮವಾರ ಶಾಲೆಗೆ ತೆರಳಿದ್ದು ಮಧ್ಯಾಹ್ನ 12:45 ರ ವೇಳೆಗೆ ಶಾಲೆಯಿಂದ ಹೊರ ಬಂದಿದ್ದು ಶಾಲಾ ಅವಧಿ ಮುಗಿದು ಸಂಜೆಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ. ಮಗನು ಮನೆಗೆ ಬಾರದ ಕಾರಣ ಅವನ ತಂದೆ ತಾಯಿ ಮುಂಬಾರು ಗ್ರಾಮ ಪಂಚಾಯಿತಿಯ ಮಾವಿನಕಟ್ಟೆ ಬೇಹಳ್ಳಿಯ ರವಿ ಹಾಗೂ ಶಶಿಕಲಾ ಶಾಲೆಯಲ್ಲೂ…

Read More

ಫೆಂಗಲ್ ಚಂಡಮಾರುತ – ಶಿವಮೊಗ್ಗ ಜಿಲ್ಲಾದ್ಯಂತ ಡಿ.3 ರಂದು ಶಾಲಾ , ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ

ಫೆಂಗಲ್ ಚಂಡಮಾರುತ – ಶಿವಮೊಗ್ಗ ಜಿಲ್ಲಾದ್ಯಂತ ಡಿ.3 ರಂದು ಶಾಲಾ , ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವವಾಗುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಪದವಿ, ಪದವಿ ಪೂರ್ವ ಕಾಲೇಜುಗಳು, 1-10 ನೇ ತರಗತಿ ಮತ್ತು ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಪ್ರಭಾರ ಜಿಲ್ಲಾ ಪಂಚಾಯತ್ ಸಿಇಒ ಹೇಮತ್ ಕುಮಾರ್ ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಿದ್ದಾರೆ. ಮುಂದಿನ ಎರಡು ದಿನಗಳು ಅಧಿಕ ಮಳೆಯಾಗುವ ಹಿನ್ನಲೆಯಲ್ಲಿ…

Read More

ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಸ್ಕೂಟಿ ವಿಜೇತಳಾದ ಬಡ ಮಹಿಳೆ

ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಸ್ಕೂಟಿ ವಿಜೇತಳಾದ ಬಡ ಮಹಿಳೆ ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಲಕ್ಕಿ ಡ್ರಾ’ ಸ್ಪರ್ಧೆಯ ವಿಜೇತರನ್ನು ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ಲಕ್ಕಿ ಡ್ರಾ ದಲ್ಲಿ 265 ವಿಜೇತ ಸಂಖ್ಯೆಯಾಗಿದ್ದು ಎಲೆಕ್ಟ್ರಿಕ್ ಸ್ಕೂಟಿಯ  ವಿಜೇತರಾಗಿ ತೀರ್ಥಹಳ್ಳಿ ರಸ್ತೆಯ ಗ್ರಾಮ ಪಂಚಾಯತಿ ಬಡಾವಣೆಯ ನಿವಾಸಿ ರಾಣಿ ಕೋಂ ರಾಮಚಂದ್ರ ಎಂಬುವವರು ಆಯ್ಕೆಯಾಗಿದ್ದಾರೆ. ಈ…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (03-12-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (03-12-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 03/12/24 ರಂದು ಬೆಳಿಗ್ಗೆ 10-00 ರಿಂದ ಸಂಜೆ 06.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಶಾಖೆಯಲ್ಲಿ ಡಿ. 03 ರಂದು ಬೆಳಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ 110/11 ಕೆ.ವಿ. ಎಮ್.ಯು.ಎಸ್.ಎಸ್. ರಿಪ್ಪನ್‌ಪೇಟೆಯಲ್ಲಿ ತುರ್ತು ನಿರ್ವಹಣೆ ಮತ್ತು…

Read More

ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ

ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ ಶಿವಮೊಗ್ಗ : ಪತ್ರಕರ್ತರೊಬ್ಬರಿಗೆ ಸ್ಕ್ಯಾಮ್‌ ಕಾಲ್‌ವೊಂದು ಬಂದಿದ್ದು ತಾವು ದೆಹಲಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ನಿಮ್ಮ ಆಧಾರ್‌ ನಂಬರ್‌ ಮೂಲಕ ದೆಹಲಿಯಲ್ಲಿ ಕೆನರಾ ಬ್ಯಾಂಕ್‌ ನಲ್ಲಿ ಅಕೌಂಟ್‌ ಓಪನ್‌ ಮಾಡಲಾಗಿದೆ. ಅದರ ಮೂಲಕ ನರೇಶ್‌ ಗೋಯಲ್‌ ಮನಿಲ್ಯಾಂಡರಿಂಗ್‌ ಕೇಸ್‌ನಲ್ಲಿ  ಅಕ್ರಮವಾಗಿ ಹಣವರ್ಗಾವಣೆ ಮಾಡಲಾಗಿದೆ ಎಂದು ಹೆದರಿಸಿದ್ದಾರೆ. ಅಷ್ಟೆಅಲ್ಲದೆ, ಪ್ರಕರಣದಲ್ಲಿ ನಿಮ್ಮ ತಪ್ಪಿಲ್ಲವಾದರೆ, ತಮ್ಮ UPI ನಂಬರ್‌ಗೆ ಲಕ್ಷ ರೂಪಾಯಿ ತಕ್ಷಣವೇ ಹಾಕಬೇಕು ಎಂದು ಹೆದರಿಸಿದ್ದು, ಅರೆಸ್ಟ್‌…

Read More

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR ಶಿರಾಳಕೊಪ್ಪ: ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿ ಆಕೆಯ ಬಲತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪಂಚಾಯತಿ ನಡೆಸಿದ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿರಾಳಕೊಪ್ಪದ ರಾಗಿಕೊಪ್ಪದಲ್ಲಿ ನಡೆದಿದೆ. 30 ವರ್ಷದ ವಿವಾಹಿತ ಮಹಿಳೆಯ ಪತಿ ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದು 15 ದಿನಗಳವರೆಗೆ ಮನೆಗೆ ಬರುತ್ತಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಎದುರಿನ ಮನೆಯ ೩೮…

Read More

ಗಂಟಲಲ್ಲಿ‌ ಬಲೂನ್ ಸಿಲುಕಿ ಬಾಲಕ ಸಾವು

ಬಲೂನ್ ಗಂಟಲಲ್ಲಿ‌ ಸಿಲುಕಿ ಬಾಲಕ ಸಾವು ಶಿರಸಿ : ಬಲೂನ್‌ ಊದುತ್ತಿದ್ದ ವೇಳೇ ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಲುಕಿ ಉಸಿರುಟ್ಟಿ ಬಾಲಕನೊಬ್ಬ ಸಾವನ್ನಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ. ನವೀನ್‌ ನಾರಾಯಣ್‌ (13)  ಮೃತ ದುರ್ದೈವಿ. ಬಲೂನ್‌ ಗೆ ಗಾಳಿ ತುಂಬಿ ಆಟವಾಡುತ್ತಿದ್ದ.  ಬಲೂನ್‌ ಗೆ ಗಾಳಿ ತುಂಬುವಾಗ ಉಸಿರು ಎಳೆದುಕೊಳ್ಳುವ ಸಂದರ್ಭದಲ್ಲಿ ಬಲೂನ್‌ ಬಾಯಿಯ ಒಳಗೆ ಹೋಗಿ, ಗಂಟಲಿಗೆ ಸಿಕ್ಕಿಕೊಂಡಿದೆ. ಇದರಿಂದಾಗಿ ಆತನಿಗೆ ಉಸಿರಾಡಲು ಕಷ್ಟವಾಗಿ, ಅಲ್ಲಿಯೆ ಕುಸಿದು…

Read More

ಅಪಘಾತ ತಡೆ ಅಭಿಯಾನ – ಕೆಂಚನಾಳದಲ್ಲಿ ರಿಪ್ಪನ್‌ಪೇಟೆ ಪೊಲೀಸರ ಕಾರ್ಯಾಚರಣೆ

ಬೆಳಗ್ಗೆ ಬೆಳಗ್ಗೆ ಇದ್ದಿದ್‌ ತಿಂದ್ಕೊಂಡ್‌ ಕೆಲಸಕ್ಕೆ ಹೋಗೋ ಟೈಂನಲ್ಲಿ ಪೊಲೀಸ್‌ ಜೀಪ್‌ ಸೀದಾ ಊರೊಳಗೆ ಬರ್ತಿದ್ದರೇ, ಎಂತಾಯ್ತೋ ಏನೋ? ಏನ್‌ ಕಥೆಯೋ ಏನೋ? ಇದೆಲ್ಲಿ ಬೇಡದಿರೋ ವ್ಯಾಪಾರ ಅಂತಾ ಅನ್ನಿಸದೇ ಇರದು. ಇಂದು ರಿಪ್ಪನ್‌ ಪೇಟೆ ಪೊಲೀಸರು ಕೆಂಚನಾಳ ಗ್ರಾಮಕ್ಕೆ ಎಂಟ್ರಿ ಕೊಟ್ಟಾಗ ಅಲ್ಲಿದ್ದವರಿಗೂ ಹಾಗೆ ಅನ್ನಿಸಿತ್ತೇನೋ? ಆದರೆ ಪೊಲೀಸರು ಬೇರೆಯದ್ದೆ ಕಾರಣಕ್ಕೆ ಅಲ್ಲಿಗೆ ಹೋಗಿದ್ದರು. ರಿಪ್ಪನ್‌ಪೇಟೆ : ಪಟ್ಟಣದ ಪೊಲೀಸರು ಇಂದು ಕೆಂಚನಾಳ ಗ್ರಾಪಂ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ತೆರಳಿ ಟ್ರ್ಯಾಕ್ಟರ್ ಹಾಗೂ ಟ್ರೈಲರ್ ಗಳಿಗೆ…

Read More

ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್

ರಾಜೇಶ್ ಶೆಟ್ಟಿ ಹತ್ಯೆಯ ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಶಿವಮೊಗ್ಗ ಪೊಲೀಸರು | ಇಬ್ಬರು ಎಸ್ಕೇಪ್ ಹಳೆಯ ಬೊಮ್ಮನಕಟ್ಟೆಯಲ್ಲಿ ಶನಿವಾರ ನಡೆದ ರೌಡಿ ಶೀಟರ್ ರಾಜೇಶ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರ ಹಾಡಹಗಲೇ ಸುಮಾರು ಆರು ಜನರನ್ನು ಒಳಗೊಂಡ ತಂಡ ಮಾರಕಾಸ್ತ್ರಗಳಿಂದ ನಡು ರಸ್ತೆಯಲ್ಲಿ ರಾಜೇಶ್ ಶೆಟ್ಟಿಯನ್ನು ಬರ್ಬರ ಹತ್ಯೆಗೈದಿದ್ದರು. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ  ಚಿಟ್ಟೆ ನಾಗ, ಗಣೇಶ, ಕಿರಣ್‌ ಗೌಡ, ವೆಂಕಟೇಶ್‌ ರನ್ನು…

Read More