Headlines

ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ

ಪತ್ರಕರ್ತನಿಗೆ ಡಿಜಿಟಲ್ ಅರೆಸ್ಟ್ ಬೆದರಿಕೆ – ಹಣಕ್ಕಾಗಿ ಬೇಡಿಕೆ

ಶಿವಮೊಗ್ಗ : ಪತ್ರಕರ್ತರೊಬ್ಬರಿಗೆ ಸ್ಕ್ಯಾಮ್‌ ಕಾಲ್‌ವೊಂದು ಬಂದಿದ್ದು ತಾವು ದೆಹಲಿ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ನಿಮ್ಮ ಆಧಾರ್‌ ನಂಬರ್‌ ಮೂಲಕ ದೆಹಲಿಯಲ್ಲಿ ಕೆನರಾ ಬ್ಯಾಂಕ್‌ ನಲ್ಲಿ ಅಕೌಂಟ್‌ ಓಪನ್‌ ಮಾಡಲಾಗಿದೆ. ಅದರ ಮೂಲಕ ನರೇಶ್‌ ಗೋಯಲ್‌ ಮನಿಲ್ಯಾಂಡರಿಂಗ್‌ ಕೇಸ್‌ನಲ್ಲಿ  ಅಕ್ರಮವಾಗಿ ಹಣವರ್ಗಾವಣೆ ಮಾಡಲಾಗಿದೆ ಎಂದು ಹೆದರಿಸಿದ್ದಾರೆ. ಅಷ್ಟೆಅಲ್ಲದೆ, ಪ್ರಕರಣದಲ್ಲಿ ನಿಮ್ಮ ತಪ್ಪಿಲ್ಲವಾದರೆ, ತಮ್ಮ UPI ನಂಬರ್‌ಗೆ ಲಕ್ಷ ರೂಪಾಯಿ ತಕ್ಷಣವೇ ಹಾಕಬೇಕು ಎಂದು ಹೆದರಿಸಿದ್ದು, ಅರೆಸ್ಟ್‌ ವಾರೆಂಟ್‌ ಕೂಡ ವಾಟ್ಸಾಪ್‌ನಲ್ಲಿ ರವಾನೆ ಮಾಡಿದ್ದಾರೆ. ಡಿಜಿಟಲ್‌ ಸ್ಕ್ಯಾಮ್‌ ಬಗ್ಗೆ ಮೊದಲೇ ಗೊತ್ತಿದ್ದ ಪತ್ರಕರ್ತರು ಸ್ಪ್ಯಾಮ್‌ ಕಾಲ್‌ ಕಟ್‌ ಮಾಡಿ ಸ್ಕ್ಯಾಮ್‌ ನಿಂದ ಬಚಾವ್‌ ಆಗಿದ್ದಾರೆ.

ಮೊದಲು ಓರ್ವ ಲೇಡಿ ಶಿವಮೊಗ್ಗದ ಪತ್ರಕರ್ತರಿಗೆ ಕರೆ ಮಾಡಿ, ನಿಮ್ಮ ನಂಬರ್‌ ಇದು, ನಿಮ್ಮೆ ಹೆಸರು ಇದು, ನಿಮ್ಮ ಆಧಾರ್‌ ಕಾರ್ಡ್‌ ಇದು ಎನ್ನುತ್ತ ವೈಯಕ್ತಿಕ ವಿವರಗಳನ್ನ ತಿಳಿಸಿದ್ದಾರೆ. ಇದನ್ನೆ ಕೇಳಿ ಪತ್ರಕರ್ತರು ಅಚ್ಚರಿಗೊಂಡಿದ್ದಾರೆ. ಆ ಬಳಿಕ ನಿಮ್ಮ ಆಧಾರ್‌ ಬಳಸಿ ಡ್ರಗ್ಸ್‌ ಪೆಡ್ಲಿಂಗ್‌ ಮಾಡಲಾಗಿದ್ದು ಶಸ್ತ್ರಾಸ್ತ್ರ ಸಾಗಾಣಿಕೆ ಮಾಡಲಾಗಿದೆ. ಈ ಬಗ್ಗೆ ಇನ್ನೊಬ್ಬರು ಮಾತನಾಡುತ್ತಾರೆ ಎಂದು ಕರೆಯನ್ನ ಮತ್ತೊಬ್ಬ ಮಹಿಳೆಗೂ ವರ್ಗಾವಣೆ ಮಾಡಿದ್ದಾರೆ.

ಆಕೆಯು ಸಹ ಪತ್ರಕರ್ತರನ್ನು ಹೆದರಿಸಿ ದೆಹಲಿ ಸೈಬರ್‌ ಕ್ರೈಂನವರು ಕರೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಬಳಿಕ ದೆಹಲಿ ಪೊಲೀಸ್‌ ಲಾಂಛನ ಇರುವ ಕೊಠಡಿಯೊಂದರಿಂದ ಮದ್ಯವಯಸ್ಕನೊಬ್ಬ ಪೊಲೀಸ್‌ ಅಧಿಕಾರಿಯ ರೀತಿಯಲ್ಲಿ ವಿಡಿಯೋ ಕರೆ ಮಾಡಿ, ನರೇಶ್‌ ಗೋಯಲ್‌ ಮನಿ ಲ್ಯಾಂಡರಿಂಗ್‌ ಪ್ರಕರಣದಲ್ಲಿ ನಿಮ್ಮ ಆಧಾರ್‌ ಹಾಗೂ ಅಕೌಂಟ್‌ ಲಿಂಕ್‌ ಆಗಿದ್ದು, ಪ್ರಕರಣದಲ್ಲಿ ನಿಮ್ಮನ್ನ ಅರೆಸ್ಟ್‌ ಮಾಡಲಾಗುತ್ತಿದೆ. ನ್ಯಾಶನಲ್‌ ಸೆಕ್ಯುರಿಟಿ ವಿಚಾರವಾದ್ದರಿಂದ ಈ ವಿಚಾರವನ್ನು ಬೇರೆಯವರಿಗೆ ಹೇಳುವಂತಿಲ್ಲ. ನಿಮಗೆ ಅರೆಸ್ಟ್‌ ವಾರಂಟ್‌ ಕಳುಹಿಸುತ್ತಿದ್ದೇವೆ ಎಂದು ವಾಟ್ಸಾಪ್‌ನಲ್ಲಿ ವಾರಂಟ್‌ ರವಾನಿಸಿದ್ದಾರೆ. ಬಳಿಕ ಈ ಪ್ರಕರಣದಲ್ಲಿ ನಿಮ್ಮ ತಪ್ಪಿಲ್ಲವಾದರೇ, UPI ನಂಬರ್‌ಗೆ ಲಕ್ಷ ರೂಪಾಯಿ ಕಳುಹಿಸಿ ಎಂದಿದ್ದಾರೆ. ಇದಕ್ಕೆ ಪತ್ರಕರ್ತರು ತಮಗೆ ಆನ್‌ಲೈನ್‌ ಟ್ರಾಂಜೆಕ್ಷನ್‌ ಬರುವುದಿಲ್ಲ ಎಂದಿದ್ದಾರೆ.

ತಕ್ಷಣವೇ ಸ್ಪ್ಯಾಮ್‌ ಕರೆ ಮಾಡಿದ್ದ ನಕಲಿ ಪೊಲೀಸ್‌ ನಿಮಗೆ ಒಂದು ಲಿಂಕ್‌ ಕಳುಹಿಸುತ್ತೇನೆ, ಅದನ್ನ ಕ್ಲಿಕ್‌  ಮಾಡಿ ಸ್ಕ್ರೀನ್‌ ಶೇರ್‌ ಮಾಡಿ ಎಂದಿದ್ದಾರೆ. ಈ ಮಾತು ಕೇಳುತ್ತಲೇ ಪತ್ರಕರ್ತರು ಇಂಟರ್‌ ನೆಟ್‌ ಆಫ್‌ ಮಾಡಿ ಕರೆ ಸ್ಥಗಿತಗೊಳಿಸಿದ್ದಾರೆ. ಆ ಬಳಿಕವೂ ಸುಮ್ಮನಾಗದ ಸ್ಪ್ಯಾಮ್‌ ಆರೋಪಿಗಳು ಪತ್ರಕರ್ತರಿಗೆ ಮೆಸೇಜ್‌ ಕಳುಹಿಸಿ, ನಮಗೆ ಸಹಕಾರ ಕೊಡದಿದ್ದರೇ ಈ ವಾರಂಟ್‌ನಲ್ಲಿ ಸ್ಥಳೀಯ ಪೊಲೀಸ್‌ ಠಾಣೆಗೆ ನೀಡುವುದಾಗಿ ವಾರ್ನಿಂಗ್‌ ಕೊಟ್ಟಿದ್ದಾರೆ. ಯಾವಾಗ ಪತ್ರಕರ್ತರು ಯಾವುದಕ್ಕೂ ಉತ್ತರಿಸಲಿಲ್ಲವೋ ಆರೋಪಿಗಳು ಸೈಲೆಂಟ್‌ ಆಗಿದ್ದಾರೆ.

Leave a Reply

Your email address will not be published. Required fields are marked *