Headlines

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR

ವಿವಾಹಿತ ಮಹಿಳೆಯ ಬಲಾತ್ಕಾರಕ್ಕೆ ಯತ್ನ – ಪಂಚಾಯತಿ ಕರೆದು ಪತಿಯ ಮೇಲೆ ಹಲ್ಲೆ – ಐವರ ಮೇಲೆ FIR

ಶಿರಾಳಕೊಪ್ಪ: ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿ ಆಕೆಯ ಬಲತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಪಂಚಾಯತಿ ನಡೆಸಿದ ಪತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿರಾಳಕೊಪ್ಪದ ರಾಗಿಕೊಪ್ಪದಲ್ಲಿ ನಡೆದಿದೆ.

30 ವರ್ಷದ ವಿವಾಹಿತ ಮಹಿಳೆಯ ಪತಿ ಕೆಲಸದ ಮೇಲೆ ದೆಹಲಿಗೆ ಹೋಗುತ್ತಿದ್ದು 15 ದಿನಗಳವರೆಗೆ ಮನೆಗೆ ಬರುತ್ತಿರಲಿಲ್ಲ. ಇದನ್ನು ದುರುಪಯೋಗ ಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಎದುರಿನ ಮನೆಯ ೩೮ ವರ್ಷದ ವ್ಯಕ್ತಿ ವಿವಾಹಿತ ಮಹಿಳೆಯ ಮೇಲೆ ಕಣ್ಣು ಹಾಕಿದ್ದನು. ಮನೆ ಬಿಟ್ಟು ಹೊರ ಬರುವ ಮಹಿಳೆಗೆ ಕೆಟ್ಟ ದೃಷ್ಠಿಯಿಂದ ನೋಡುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹುಬ್ಬೇರಿಸುವುದನ್ನು ಮಾಡುತ್ತಿದ್ದನು. ವ್ಯಕ್ತಿಯ ಬಗ್ಗೆ ಮಹಿಳೆ ನಿರ್ಲಕ್ಷ್ಯಿಸಿದ್ದರು.

ಆದರೆ ನ.28 ರಂದು ಮಕ್ಕಳು ಮನೆಯ ಎದುರು ಆಡುತ್ತಿದ್ದು ಅವರನ್ನು ಮನೆಯ ಒಳಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ವಿವಾಹಿತ ಮಹಿಳೆಯ ಮನೆಯ ಒಳಗೆ ವ್ಯಕ್ತಿ ನುಗ್ಗಿ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಮಹಿಳೆ ಕಿರುಚಿದ ಕಾರಣ ಅಕ್ಕಪಕ್ಕದ ಜನ ಧಾವಿಸಿದಾಗ ತಕ್ಷಣವೇ ವ್ಯಕ್ತಿ ಪರಾರಿಯಾಗಿದ್ದಾನೆ.

ಈ ಕುರಿತು ಸೇವಾಲಾಲ್ ದೇವಸ್ಥಾನದಲ್ಲಿ ತೀರ್ಮಾನ ನಡೆಸಲಾಗಿತ್ತು. ಈ ಸಭೆಯಲ್ಲಿ ನೊಂದ ಮಹಿಳೆಯ ಪತಿ ಭಾಗಿಯಾಗಿದ್ದರು. ಆದರೆ ಪಂಚಾಯಿತಿಯಲ್ಲಿ ನಿನ್ನ ಹೆಂಡತಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾಗದೆ ಪಂಚಾಯಿತಿಗೆ ಬಂದಿದ್ದೀಯ ಎಂದು ಹಲ್ಲೆ ನಡೆಸಲಾಗಿದೆ.

ಹಲ್ಲೆ ನಡೆಸಿದ ಐವರ ವಿರುದ್ಧ ಶಿರಾಳಕೊಪ್ಪದ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *