POSTMANNEWS

ನೈಜ ಸುದ್ದಿ ನೇರ ಬಿತ್ತರ..

ಟಯರ್ ಸ್ಪೋಟಗೊಂಡು ಖಾಸಗಿ ಬಸ್ ಸಂಪೂರ್ಣ ಬೆಂಕಿಗಾಹುತಿ

ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಬಳಿ ಖಾಸಗಿ ಬಸ್ಸೊಂದು ಅಗ್ನಿ ಅಕಸ್ಮಿಕಕ್ಕೆ ತುತ್ತಾಗಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.

ಅದೃಷ್ಟಕ್ಕೆ ಯಾವ ಪ್ರಯಾಣಿಕರಿಗೂ ಅಪಾಯ ಉಂಟಾಗಿಲ್ಲ . ಖಾಸಗಿ ಬಸ್ ಮಂಗಳೂರಿನಿಂದ ದಾವಣಗೆರೆಗ ತೆರಳುತ್ತಿತ್ತು . ಜಾವ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸಕ್ರೆಬೈಲ್ ಆನೆ ಬಿಡಾರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ ಟಯರ್ ಬ್ಲಾಸ್ಟ್ ಆಗಿ ಇಡಿಬಸ್ ಬೆಂಕಿಗೆ ಕಾಣಿಸಿಕೊಂಡಿದೆ.

ತಕ್ಷಣವೇ ಬಸನ್ನು ಚಾಲಕ ರಸ್ತೆ ಬದಿಗೆ ತಂದು. ನಿಲ್ಲಿಸಿದ್ದಾರೆ ಆಬಳಿಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. 18 ಜನ ಪ್ರಯಾಣಿಕರಿದ್ದ ಬಸ್ ನ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

18 ಜನರನ್ನ ಬೇರೆ ಬಸ್ ನಲ್ಲಿ ಸಾಗಿಸಲಾಗಿದೆ. ಪ್ರಕರಣ ಶಿವಮೊಗ್ಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

About The Author

Leave a Reply

Your email address will not be published. Required fields are marked *