Headlines

Ripponpete | ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು

Ripponpete | ಬೈಕ್ ಸಮೇತ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು

ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಪಂ ವ್ಯಾಪ್ತಿಯ ಅಡ್ಡೆರಿ ಗ್ರಾಮದ ಬಳಿಯಲ್ಲಿ ಮಳೆಯಿಂದ ಕೊರೆದಿರುವ ಸುಮಾರು 25 ಅಡಿ ಆಳದ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾರೋಹಿತ್ತಲು ಗ್ರಾಮದ ವಾಸಿಯಾದ ದೇವೇಂದ್ರಪ್ಪ ರವರು ಇಂದು ಸಂಜೆ ಬೈಕ್ ನಲ್ಲಿ ತೆರಳುತಿದ್ದಾಗ ಈ ಹಿಂದೆ ಬಂದ ಮಳೆಯಿಂದ ಕೊರೆದಿರುವ ರಸ್ತೆಯ ಪಕ್ಕದಲ್ಲಿರುವ 25 ಅಡಿ ಆಳದ ಹಳ್ಳಕ್ಕೆ ಬೈಕ್ ಸಮೇತ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬೈಕ್ ಹಾಗೂ ಮೃತದೇಹ ಹಳ್ಳದಲ್ಲಿಯೇ ಇದ್ದು ಸ್ಥಳದಲ್ಲಿ ಸಾರ್ವಜನಿಕರು ನೆರೆದಿದ್ದಾರೆ.

ಇಂದು ಸಂಜೆ ಹಾಲು ಕೊಟ್ಟು ಹಿಂದಿರುಗುತಿದ್ದಾಗ ಈ ದುರ್ಘಟನೆ ನಡೆದಿದ್ದು ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *