ಮನೆಗಳ್ಳತನ ಹಾಗೂ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ – ಮನೆಗಳ್ಳತನವೆಸಗಿದ್ದ ಐಟಿ ಉದ್ಯೋಗಿ ಅರೆಸ್ಟ್

ಮನೆಗಳ್ಳತನ ಹಾಗೂ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ – ಮನೆಗಳ್ಳತನವೆಸಗಿದ್ದ ಐಟಿ ಉದ್ಯೋಗಿ ಅರೆಸ್ಟ್

ಹೊಸಮನೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಬ್ಯಾಗ್ ಕಳವು ಮತ್ತು ಮನೆಕಳ್ಳತನ ಪ್ರಕರಣಗಳು ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು  ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗದ ನಿವಾಸಿ ಪ್ರಭಾವತಿ ಎಂಬುವರು ಭದ್ರಾವತಿ ಬಸ್ ನಿಲ್ದಾಣಕ್ಕೆ ಬಂದಾಗ  ಮಹಿಳೆಯೊಬ್ಬರು ಬ್ಯಾಗ  ಹಿಡಿದು ಕಳುವಾದ ಪ್ರಕರಣವನ್ನ ಬೇಧಿಸಿದ ಪೊಲೀಸರು‌ 48 ಗಂಟೆಯ ಒಳಗೆ ಆರೋಪಿಯನ್ನ ಬಂಧಿಸಿ 20 ಲಕ್ಷ ರೂ ಮೌಲ್ಯದ 276.75 ಗ್ರಾಂ ತೂಕದ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಮಲಮ್ಮ ಎಂದು ಗುರುತಿಸಲಾಗಿದ್ದು ಭದ್ರಾವತಿ ನಿವಾಸಿಯಾಗಿದ್ದಾರೆ.  ಚಿನ್ನಾಭಭರಣದ ಜೊತೆಗೆ 16 ಸಾವಿರ ರೂ ಮೌಲ್ಯದ ಎರಡು ರೇಷ್ಮೇ ಸೀರೆಯೂ ಪತ್ತೆಯಾಗಿದೆ.

ಮನೆಗಳ್ಳತನದ ಆರೋಪಿಯ ಬಂಧನ :

ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆ.21 ರಂದು ವಿನೋದ್ ಜಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಹಬ್ಬಕ್ಕೆ ತೆರಳಿದಾಗ 20 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣವನ್ನ ಕದ್ದಕೊಂಡು ಹೋದ ಪ್ರಕರಣ ದಾಖಲಾಗಿತ್ತು.

ಹೊಸಮನೆ ಕೇಶವಾಪುರದ ಐಟಿ ಉದ್ಯೋಗಿ ನಿತಿನ್ ಎಂಬ 27 ವರ್ಷದ ಯುವಕನನ್ನ ಪತ್ತೆ ಮಾಡಿದ ಪೊಲೀಸರು ಆತನಿಂದ 259 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಡಿವೈಎಸ್ಪಿ ನಾಗರಾಜ್, ಭದ್ರಾವತಿ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಹೊಸಮನೆ ಪಿಎಸ್ಐ ಕೃಷ್ಣಕುಮಾರ್, ಸಿಬ್ಬಂದಿಗಳಾದ ಮಧುಪ್ರಸಾದ್, ಆದರ್ಶ ಶೆಟ್ಟಿ, ತೇಜಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *