GridArt_20240925_150244893.jpg

ಬೈಕ್ ಅಪಘಾತದಲ್ಲಿ ಯುವಕ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾಗರ ತಾಲ್ಲೂಕು ಸಾಗರ ಟೌನ್‌ ಗಾಂಧಿನಗರ ನಿವಾಸಿ ಸಮೀರ್‌ ಎಂಬುವವರು ನಿನ್ನೆ ದಿನ ಅಣಲೇಕೊಪ್ಪದಲ್ಲಿರುವ ಅವರ ಅಕ್ಕನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮೀರ್‌ ಗೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಮೀಪ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣದ ಆಂಬುಲೆನ್ಸ್‌ ಮೂಲಕ ಸಮೀರ್‌ರವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಸಮೀರ್‌ ಸಾವನ್ನಪ್ಪಿದ್ದಾರೆ.

ಸಮೀರ್‌ಗೆ ಚಿಕ್ಕ ವಯಸ್ಸಿದ್ದಾಗಲೇ ಅವರ ತಂದೆ ತಾಯಿ ತೀರಿಕೊಂಡಿದ್ದರು . ಇನ್ನೂ ಘಟನೆಯಲ್ಲಿ ಸಮೀರ್‌ ಬೈಕ್‌ಗೆ ಡಿಕ್ಕಿಯಾದ ಕಾರು ಬೆಳಗಾವಿ ಮೂಲದ್ದು ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *