RIPPONPETE | ಈದ್ ಮಿಲಾದ್ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ | ಗುರುವಾರ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ , ಶಾಸಕರುಗಳಿಗೆ ಸನ್ಮಾನ
ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಗುರುವಾರ ಸೌಹಾರ್ದ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ನಾಸೀರ್ ಹಮೀದ್ ಸಾಬ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS ಹಾಗೂ SSF ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿಯವರ 1499 ನೇ ಜನ್ಮ ದಿನದ ಪ್ರಯುಕ್ತ ಹುಬ್ಬುನ್ನಬಿ ಮಿಲಾದ್ ಕಾನ್ಪರೆನ್ಸ್ ಅಂಗವಾಗಿ ಸೌಹಾರ್ಧ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಮುಖಂಡರು , ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ರಿಪ್ಪನ್‌ಪೇಟೆ ಪಟ್ಟಣದಲ್ಲಿ ಈ ಬಾರಿ ಈದ್ ಮಿಲಾದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ನಡೆದಿದೆ.
ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸೀದಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಈ ಬಾರಿ ಅದ್ದೂರಿಯಾಗಿ ಈದ್ ಮಿಲಾದ್ ಕಾರ್ಯಕ್ರಮವನ್ನು ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ.
ಈ ಬಾರಿ ಅದ್ದೂರಿ ಈದ್ ಮಿಲಾದ್ ಹಬ್ಬವನ್ನು 26,27,28 ಮತ್ತು 29 ರಂದು ಆಚರಿಸಲಾಗುತ್ತದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ ತಿಳಿಸಿದರು.
ಈದ್ ಮಿಲಾದ್ ಆಚರಣೆಯ ಅಂಗವಾಗಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಹೊಸನಗರ ರಸ್ತೆಯಲ್ಲಿ ದೀಪಾಲಾಂಕರ ಮಾಡಲಾಗಿದ್ದು ನೋಡುಗರ ಮನಸೆಳೆಯುವಂತಿದೆ.















Leave a Reply