ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್
ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು.
ರಾಖಿ ಕಟ್ಟುವುದರಿಂದ ಅಣ್ಣ-ತಂಗಿಯರ ಸಂಬಂಧ ಸಹೋದರತ್ವ ಗಟ್ಟಿಯಾಗಿರುತ್ತದೆಂಬ ನಂಬಿಕೆ ನಮ್ಮ ಹಿಂದುಗಳದ್ದಾಗಿದ್ದು ಪೊಲೀಸರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ಷಣೆಯ ಒತ್ತಡದಲ್ಲಿ ಹಬ್ಬ ಹರಿದಿನಗಳಿಂದ ದೂರವಿರುವ ಪೊಲೀಸರು ಕರ್ತವ್ಯವೇ ದೇವರು ಎನ್ನುವಾಗ ನಾಗರಪಂಚಮಿ ಸಂಪತ್ತು ಶುಕ್ರವಾರ ಮಂಗಳಗೌರಿ ಹಬ್ಬ ಗಣೇಶ ಚತುರ್ಥಿ ಇಂತಹ ಹಬ್ಬಗಳಲ್ಲಿ ಮಹಿಳೆಯರು ತವರು ಮನೆಗೆ ಹೋಗಿ ಅರಿಶಿಣ ಕುಂಕುಮದೊಂದಿಗೆ ಬಾಗಿನ ಪಡೆಯುವುದು ಮುತ್ತೈದೆಯರಿಗೆ ಹಬ್ಬವೋ ಹಬ್ಬ ಆ ಕಾರಣ ಹೊಂಬುಜದ ಗ್ರಾಮ ಪಂಚಾಯ್ತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ಸಹಿತ ಕಳೆದ 12 ವರ್ಷದಿಂದ ಈ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಯಶಸ್ವತಿ ವೃಷಭರಾಜ್ ಜೈನ್ ಕುಟುಂಬದವರು ಹೊಸನಗರ ವೃತ್ತ ನಿರೀಕ್ಷಕರಾದ ಗುರಣ್ಣ ಹೆಬ್ಬಾರ್, ರಿಪ್ಪನ್‌ಪೇಟೆ ಪಿಎಸ್‌ಐ ಎಸ್ ಪಿ ಪ್ರವೀಣ್ ಮತ್ತು ಸಿಬ್ಬಂದಿ ವರ್ಗದವರಿಗೆ ರಾಖಿ ಕಟ್ಟಿ ಪರಸ್ಪರ ಹಸ್ತಲಾಘವ ಮಾಡುವುದರೊಂದಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅರಿಶಿಣ ಕುಂಕುಮ ತಿಲಕವನ್ನಿಟ್ಟು ಬಾಗಿನದೊಂದಿಗೆ ಉಡಿತುಂಬಿ ಶುಭಹಾರೈಸಿದರು.
ಈ ಸಂಧರ್ಭದಲ್ಲಿ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬದ ಪೂರ್ಣಿಮಾ , ಪ್ರವೀಣ್ ಇದ್ದರು.