12 ವರ್ಷದ ಹಿಂದೆ ಕಾಣೆಯಾದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿಯಿಂದ ಠಾಣೆಯಲ್ಲಿ ದೂರು.!

12 ವರ್ಷದ ಹಿಂದೆ ಕಾಣೆಯಾದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿಯಿಂದ ಠಾಣೆಯಲ್ಲಿ ದೂರು.!

ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಣಜಿ ಗ್ರಾಮದ ಹೊಸ ಮನೆಯ ವಾಸಿ ರತ್ನಮ್ಮ ಎಂಬುವವರು ಹೊಸನಗರ ಆರಕ್ಷಕ ಠಾಣೆಗೆ ದೂರು 12 ವರ್ಷದ ಹಿಂದೆ ಮನೆ ಬಿಟ್ಟು ಹೋಗಿರುವ ತನ್ನ ಪತಿ 69 ವರ್ಷದ ಶಿವಪ್ಪಗೌಡ ಎಂಬುವರನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ.

ಮಾನಸಿಕವಾಗಿ ದುರ್ಬಲವಾಗಿದ ಕುಡಿತದ ಚಟವನ್ನು ಹೊಂದಿದ್ದ ಶಿವಪ್ಪಗೌಡ ಈ ಹಿಂದೆ ಮೂರ್ ನಾಲ್ಕು ಬಾರಿ ಮನೆ ಬಿಟ್ಟು ಹೋಗಿದ್ದು ಕೆಲವೊಮ್ಮೆ ಎರಡು ಮೂರು ವರ್ಷಗಳ ನಂತರ ಹಿಂತಿರುಗುತ್ತಿದ್ದು ಈ ಬಾರಿ 2012ರ ಜನವರಿ 20ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಹೋದವರು ಈವರೆಗೂ ಬಾರದ ಕಾರಣ ಅವರನ್ನು ಹುಡುಕಿ ಕೊಡುವಂತೆ ಪತ್ನಿ ರತ್ನಮ್ಮ ಹೊಸನಗರ ಆರಕ್ಷಕ ಠಾಣೆಗೆ ದೂರು ನೀಡಿದ್ದು ಶಿವಪ್ಪಗೌಡರು ಮನೆ ಬಿಟ್ಟು ಹೋಗುವಾಗ 57 ವರ್ಷ ವಯಸ್ಸಾಗಿದ್ದು ಈಗ ಅವರ ವಯಸ್ಸು 69 ಆಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದು ಅವರೇ ಈ ಹಿಂದೆ 3-4 ಬಾರಿ ಮನೆ ಬಿಟ್ಟು ಹೋದವರು ವಾಪಸ್ ಬಂದಿದ್ದು ಈ ಬಾರಿ 12 ವರ್ಷ ಆದರೂ ಮನೆಗೆ ವಾಪಸ್ ಬಾರದ ಕಾರಣ ತಿಳಿಸಿದ್ದಾರೆ.

ಹೊಸನಗರ ಆರಕ್ಷಕ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *