POSTMAN NEWS

ನೈಜ ಸುದ್ದಿ ನೇರ ಬಿತ್ತರ..

SHIVAMOGGA | ಬೀಡಿ ಸಿಗುತ್ತಿಲ್ಲ ಎಂದು ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

GridArt 20240903 114419262.jpg

SHIVAMOGGA | ಬೀಡಿ ಸಿಗುತ್ತಿಲ್ಲ ಎಂದು ಜೈಲಿನಲ್ಲಿ ಖೈದಿಗಳ ಪ್ರತಿಭಟನೆ

ಆರೋಪಿ ನಟ ದರ್ಶನ್‌ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ವರದಿಯಾದ ಬಳಿಕ ಇದೀಗ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಲಾಗುತ್ತಿದೆ. ಹೀಗಾಗಿ ಈವರೆಗೆ ಕೆಲವು ಸೌಲಭ್ಯ ಪಡೆಯುತ್ತಿದ್ದ ಕೈದಿಗಳು ಇದೀಗ ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ.

ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿಯೂ ದರ್ಶನ್ ಪ್ರಕರಣದ ನಂತರ ಜೈಲು ವ್ಯವಸ್ಥೆಯನ್ನು ಕಠಿಣ ಮಾಡಲಾಗಿದೆ. ಹೀಗಾಗಿ ಇದೀಗ ಬೀಡಿ ನೀಡದ ಹಿನ್ನೆಲೆಯಲ್ಲಿ ಕೈದಿಗಳು ಬೀಡಿ ನೀಡಲು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.