Headlines

HOSANAGARA | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಾಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

ಹೊಸನಗರ : ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯಕಾರಣಿ ಸಭೆಯ ನಿರ್ಣಯದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಲೇಖನಿ ಕೆಳಗಿಟ್ಟು, ಮೊಬೈಲ್ ಆಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ಗುರುವಾರ ಇಲ್ಲಿನ ತಾಲೂಕು ಕಚೇರಿ ಎದುರು ಕೈಗೆ ಕಪ್ಪು ಪಟ್ಟಿ ಧರಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಘಟನೆ ನಡೆದಿದೆ. ಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಘದ ಹೊಸನಗರ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಕಂದಾಯ…

Read More

ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದ ಜಾಮೀಯಾ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಸಮಿತಿ ಹಾಗೂ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಹಯೋಗದಲ್ಲಿ ಈದ್ ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು.ರಕ್ತಕ್ಕೆ ಪರ್ಯಾಯ ಯಾವುದೇ ವಸ್ತು ಇಲ್ಲ. ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದರಿಂದ ರಕ್ತದಾನಿಗಳ ಆರೋಗ್ಯವೂ ಸುಧಾರಿಸುತ್ತದೆ ಹಾಗಾಗಿ ಆರೋಗ್ಯವಂತ…

Read More

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲಿ ; ಶಾಸಕ ಆರಗ ಜ್ಞಾನೇಂದ್ರ ಆಗ್ರಹ

ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲಿ ; ಶಾಸಕ ಆರಗ ಜ್ಞಾನೇಂದ್ರ ಆಗ್ರಹ ಹೊಸನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಆರಗಜ್ಞಾನೇಂದ್ರ ಆಗ್ರಹಿಸಿದರು. ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಬುಧವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿ ವಜಾ ಆಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ…

Read More

RIPPONPETE | ಈದ್ ಮಿಲಾದ್ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ | ಗುರುವಾರ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ , ಶಾಸಕರುಗಳಿಗೆ ಸನ್ಮಾನ

RIPPONPETE | ಈದ್ ಮಿಲಾದ್ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ | ಗುರುವಾರ ಸೌಹಾರ್ದ ಸಮ್ಮಿಲನ ಕಾರ್ಯಕ್ರಮ , ಶಾಸಕರುಗಳಿಗೆ ಸನ್ಮಾನ ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಗುರುವಾರ ಸೌಹಾರ್ದ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ನಾಸೀರ್ ಹಮೀದ್ ಸಾಬ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗುರುವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS…

Read More

ಬೈಕ್ ಅಪಘಾತದಲ್ಲಿ ಯುವಕ ಸಾವು

ಬೈಕ್ ಅಪಘಾತದಲ್ಲಿ ಯುವಕ ಸಾವು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ 22 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಾಗರ ತಾಲ್ಲೂಕು ಸಾಗರ ಟೌನ್‌ ಗಾಂಧಿನಗರ ನಿವಾಸಿ ಸಮೀರ್‌ ಎಂಬುವವರು ನಿನ್ನೆ ದಿನ ಅಣಲೇಕೊಪ್ಪದಲ್ಲಿರುವ ಅವರ ಅಕ್ಕನ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಮೀರ್‌ ಗೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ಸಮೀಪ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣದ ಆಂಬುಲೆನ್ಸ್‌ ಮೂಲಕ ಸಮೀರ್‌ರವರನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ…

Read More

RIPPONPETE | ಮಳವಳ್ಳಿ ಗೋಪಾಲಣ್ಣ ಇನ್ನಿಲ್ಲ

RIPPONPETE | ಮಳವಳ್ಳಿ ಗೋಪಾಲಣ್ಣ ಇನ್ನಿಲ್ಲ ರಿಪ್ಪನ್‌ಪೇಟೆ : ತಳಲೆ ಸೊಸೈಟಿಯ ಮಾಜಿ ಅಧ್ಯಕ್ಷರು , ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕರು ಹಾಗೂ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಳವಳ್ಳಿ ಗ್ರಾಮದ ಗೋಪಾಲಣ್ಣ ರವರು ಇಂದು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯದ ಕಾರಣ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಬುಧವಾರ ಬೆಳಗಿನಜಾವ ಮೃತಪಟ್ಟಿದ್ದಾರೆ. ತಳಲೆ ಪ್ರಾಥಮಿಕ ಸಹಕಾರ ಸಂಘದ ಮಾಜಿ…

Read More

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ

ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ – ಪ್ರೇಯಸಿ ಸೇರಿದಂತೆ ಆರು ಜನರ ಬಂಧನ ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಕಲಬುರಗಿ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ.ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ…

Read More

ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್, ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ..!

ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದ ಹೈಕೋರ್ಟ್, ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ..! ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಿಲುವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ. ಸುದೀರ್ಘ ವಾದ, ಪ್ರತಿವಾದದ ಬಳಿಕ ಪ್ರಕರಣದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾ. ನಾಗಪ್ರಸನ್ನ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಮತ್ತು ಭಾರತೀಯ ನ್ಯಾಯಸಂಹಿತೆ 218ರಡಿ ರಾಜ್ಯಪಾಲರು ನೀಡಿದ್ದ…

Read More

ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು

ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು ಶಿಕಾರಿಪುರ : ಲಾರಿ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ  ಮಾಡುತ್ತಿರುವ ವೇಳೆ ಬೈಕ್ ಒಂದು ಗುದ್ದಿದ ಪರಿಣಾಮ ರಸ್ತೆಯಲ್ಲಿಲಾರಿ ಚಾಲಕ ದುರ್ಮರಣ ಹೊಂದಿದ ಘಟನೆ ಇಂದು ಸಂಜೆ ನಡೆದಿದೆ. ತೀರ್ಥಹಳ್ಳಿಯ ಯಡೇಹಳ್ಳಿಕೆರೆಯ ರಮೇಶ್ (54 ವರ್ಷ ) ಮೃತ ದುರ್ಧೈವಿ. ಶಿಕಾರಿಪುರ ಸಮೀಪದ ಕೆಂಗಟ್ಟಿ ಮತ್ತು ಸಿದ್ದನ್ಪುರ ಗ್ರಾಮದ ಮುಖ್ಯ ರಸ್ತೆಯ ಬಳಿ ಲಾರಿ ಪಂಚರ್ ಆಗಿದ್ದಕ್ಕಾಗಿ ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡು ಟಯರ…

Read More

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ..

HOSANAGARA | ಹೆಚ್ ಆರ್ ಪ್ರಕಾಶ್ ಇನ್ನಿಲ್ಲ.. ಹೊಸನಗರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಹಾಗೂ ಮಾಜಿ ಕಾರ್ಯದರ್ಶಿ  ಹೆಚ್ ಆರ್ ಪ್ರಕಾಶ್ ಇಂದು ಅವರ ಸ್ವಗೃಹ ದಲ್ಲಿ ನಿಧನರಾದರು. ಪಟ್ಟಣದ ಹಳೆ ಸಾಗರ ರಸ್ತೆಯ ದಿವಂಗತ ಸೋಡಾ ರಾಜಪ್ಪನವರ ಪುತ್ರರಾದ ಎಚ್ ಆರ್ ಪ್ರಕಾಶ್ ಅವರು ಇಂದು ಮಧ್ಯಾಹ್ನ 1:30 ಸಮಯದಲ್ಲಿ ತಮ್ಮ 63 ರ ಹರೆಯದಲ್ಲಿ ಅವರ ಸ್ವಗೃಹದಲ್ಲಿ ತೀವ್ರ ಹೃದಯಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು. ಅವಿವಾಹಿತರಾಗಿದ್ದ ಅವರು ಪಟ್ಟಣದ ಶ್ರೀ…

Read More