ಪಂಚರ್ ಹಾಕುವ ವೇಳೆ ಬೈಕ್ ಡಿಕ್ಕಿಯಾಗಿ ಲಾರಿ ಚಾಲಕ ಸಾವು
ಶಿಕಾರಿಪುರ : ಲಾರಿ ಪಂಚರ್ ಆಗಿದ್ದ ಕಾರಣ ಟಯರ್ ಬದಲಾವಣೆ ಮಾಡುತ್ತಿರುವ ವೇಳೆ ಬೈಕ್ ಒಂದು ಗುದ್ದಿದ ಪರಿಣಾಮ ರಸ್ತೆಯಲ್ಲಿ
ಲಾರಿ ಚಾಲಕ ದುರ್ಮರಣ ಹೊಂದಿದ ಘಟನೆ ಇಂದು ಸಂಜೆ ನಡೆದಿದೆ.
ತೀರ್ಥಹಳ್ಳಿಯ ಯಡೇಹಳ್ಳಿಕೆರೆಯ ರಮೇಶ್ (54 ವರ್ಷ ) ಮೃತ ದುರ್ಧೈವಿ. ಶಿಕಾರಿಪುರ ಸಮೀಪದ ಕೆಂಗಟ್ಟಿ ಮತ್ತು ಸಿದ್ದನ್ಪುರ ಗ್ರಾಮದ ಮುಖ್ಯ ರಸ್ತೆಯ ಬಳಿ ಲಾರಿ ಪಂಚರ್ ಆಗಿದ್ದಕ್ಕಾಗಿ ಲಾರಿಯನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡು ಟಯರ ಬದಲಾವಣೆ ಮಾಡುತ್ತಿರುವಾಗ ಶಿಕಾರಿಪುರದಿಂದ ಹೊನ್ನಳ್ಳಿ ಹೋಗುವ KA 01 EB 4020 ಸಂಖ್ಯೆಯ ಬಜಾಜ್ ಸಿಟಿ 100 ಮೋಟಾರ್ ಸೈಕಲ್ (ಬೈಕ್ ) ಸವಾರ ಬಸವರಾಜ್ ಗುದ್ದಿದ ಪರಿಣಾಮವಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿಯಿಂದ ಕೆಲಸದ ಮೇಲೆ KA 14 B 0842 ಸಂಖ್ಯೆಯ ಲಾರಿಯನ್ನು ತೆಗೆದುಕೊಂಡು ರಮೇಶ್ ಶಿಕಾರಿಪುರಕ್ಕೆ ತೆರಳಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.
ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗಿದ್ದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.