ಸರ್ವಧರ್ಮದ ಸಾರವೂ ಮಾನವೀಯತೆಯೇ ಆಗಿದೆ – ನಿಟ್ಟೂರು ಶ್ರೀಗಳು
ರಿಪ್ಪನ್‌ಪೇಟೆ;-ಕೂಡಿ ಬಾಳಿದರೆ ಸುಖ ಎಂಬ ಮಂತ್ರವನ್ನು ನಾವು ತಿಳಿಯಬೇಕಾಗಿದೆ.ಮನುಷ್ಯತ್ವ ಮೀರಿದ ಯಾವುದೇ ಧರ್ಮವಿಲ್ಲ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಧರ್ಮಗುರುಗಳ ಹೆಗಲ ಮೇಲಿದೆ.ವಿವಿಧ ಜಾತಿ ಧರ್ಮ ಸಂಸ್ಕೃತಿಯುಳ್ಳ ದೇಶ ನಮ್ಮದಾಗಿದೆ ಎಂದು ಗರ್ತಿಕೆರೆ ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮಿಜಿ ಹೇಳಿದರು.
ರಿಪ್ಪನ್‌ಪೇಟೆಯ ಮಹಮ್ಮದ್ ಜುಮ್ಮಾ ಮಸೀಧಿ ಗವಟೂರು ತಲಿಝೀಝುಲ್ ಇಸ್ಲಾಂ ಮದ್ರಸ ಬದ್ರಿಯಾ ಮಸ್ಜಿದ್.ಮೀಲಾದ್ ಸಮಿತಿ.ಹಾಗೂ ಎಸ್.ವೈ.ಎಸ್.ಎಸ್.ಎಸ್.ಎಫ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹಜರತ್ ಪೈಗಂಬರ್ ಮಹಮ್ಮದ್ ಮುಸ್ತಾಫಾ ರವರ ೧೪೯೯ ನೇ ಜನ್ಮ ದಿನದ ಆಂಗವಾಗಿ “ಈದ್ ಮಿಲಾದ್’’ ಹಬ್ಬದ ಸೌಹಾರ್ಧ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಹೂದೋಟದಲ್ಲಿ ವಿವಿಧ ಜಾತಿಯ ಹೂಗಳಿದ್ದು ಆದನ್ನು ಪೋಣಿಸಿದಾಗ ಹಾರವಾಗುವ ಹಾಗೆ ನಾವೆಲ್ಲರೂ ಪರಸ್ಪರ ಶಾಂತಿ ಪ್ರೀತಿಯಿಂದ ಇರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ,ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಭಾನು ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ರವರನ್ನು ಜುಮ್ಮಾ ಮಸೀದಿ ಹಾಗೂ ಈದ್ ಮಿಲಾದ್ ಸಮಿತಿ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ ವಹಿಸಿದ್ದರು.
ಈ ಸಂಧರ್ಭದಲ್ಲಿ ಈದ್ ಮಿಲಾದ್ ಸಮಿತಿ ಅಧ್ಯಕ್ಷ ನಾಸೀರ್ ಹಮೀದ್ ಸಾಬ್ , ತೀರ್ಥಹಳ್ಳಿ ಪಪಂ ಅಧ್ಯಕ್ಷ ರಹಮತುಲ್ಲಾ ಅಸಾದಿ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ , ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ , ಕೆಡಿಪಿ ಸದಸ್ಯರಾದ ಆಸೀಫ಼್ ಭಾಷಾ , ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸಾಧಿಕ್ ಕಚ್ಚಿಗೆಬೈಲು, ಶಂಶುದ್ದೀನ್ ಆರ್ ಎಸ್ , ಮಹಮ್ಮದ್ ಹನೀಫ಼್ , ರವೀಂದ್ರ ಕೆರೆಹಳ್ಳಿ , ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರುಗಳು ,ssf ಅಧ್ಯಕ್ಷ ಅಜ್ಮಲ್ ಹಾಗೂ ಇನ್ನಿತರರಿದ್ದರು.