Ripponpete | ಸಾಲಬಾಧೆ ತಾಳಲಾರದೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ರಿಪ್ಪನ್‌ಪೇಟೆ : ಸಾಲಬಾಧೆ ತಾಳಲರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೂರು ಗ್ರಾಪಂ ವ್ಯಾಪ್ತಿಯ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ.
ಕಾಳೇಶ್ವರ ಗ್ರಾಮದ ದನಂಜಯಪ್ಪ (73) ಮೃತ ದುರ್ಧೈವಿಯಾಗಿದ್ದಾರೆ.
ಧನಂಜಯಪ್ಪ ನವರು ಜಮೀನಿನಲ್ಲಿ ಬೆಳೆ ಬೆಳೆಯುವ ಉದ್ದೇಶದಿಂದ ರಿಪ್ಪನ್ ಪೇಟೆ ಕೆನರಾ ಬ್ಯಾಂಕ್ ನಲ್ಲಿ 8,00,000/ರೂಪಾಯಿ,ಡಿಸಿಸಿ ಬ್ಯಾಂಕ್ ರಿಪ್ಪನ್ ಪೇಟೆಯಲ್ಲಿ 40,000/- ರೂಪಾಯಿ ಹಾಗೂ ಧರ್ಮಸ್ಥಳ ಸಂಘದಲ್ಲಿ 1,00,000/ರೂ ಸಾಲ. ಮತ್ತು ಎಲ್ ಎನ್ ಟಿ ಸಂಸ್ಥೆಯಲ್ಲಿ 90,000/- ರೂ. ಬಿಎಸ್ ಎಸ್ ಸಂಸ್ಥೆಯಲ್ಲಿ 80,000/- ರೂ ಹಾಗೂ ಚೈತನ್ಯ ಇಂಡಿಯಾ ಸಂಸ್ಥೆಯಲ್ಲಿ 80,000/-ರೂಪಾಯಿ ಮತ್ತು ರಿಪ್ಪನ್ ಪೇಟೆ ಕೆನರಾ ಬ್ಯಾಂಕ್ ನಲ್ಲಿ 36.000/- ರೂಪಾಯಿಯಂತೆ ಒಟ್ಟು 12,26,000/- ರೂಪಾಯಿ ಸಾಲ ಮಾಡಿಕೊಂಡಿರುತ್ತಾರೆ.
ಕಳೆದ ಬಾರಿ ಕಡಿಮೆ ಮಳೆಯಿಂದಾಗಿ ಭತ್ತದ ಬೆಳೆ ನಾಶವಾಗಿ ಸರಿಯಾದ ಫಸಲು ಕೈಗೆ ಸಿಗದೇ ಇದ್ದು, ಅಲ್ಲದೇ ಒಂದೂವರೆ ಎಕರೆಯಲ್ಲಿ ಶುಂಠಿ ಬೆಳೆ ಬೆಳೆದಿದ್ದು,ಕೊಳೆ ಬಂದು ನಾಶವಾಗಿ ಬೆಳೆ ನಷ್ಟವುಂಟಾಗಿರುತ್ತದೆ. ಹಾಗೂ ಈ ಬಾರಿ ಅತಿಯಾದ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಬಂದು ನಷ್ಟವುಂಟಾಗುವ ಭೀತಿಯಿಂದ ಕೃಷಿ ಸಾಲವನ್ನು ಸಕಾಲಕ್ಕೆ ತೀರಿಸಲು ಸಾಧ್ಯವಾಗದೇ ಇದ್ದುದ್ದರಿಂದ ಮನನೊಂದು ಆಗಾಗ್ಗೆ ಕುಟುಂಬದವರಲ್ಲಿ ಸಾಲ ತೀರುವಳಿಯನ್ನು ಸಕಾಲಕ್ಕೆ ತೀರಿಸಲಾಗದೇ ಇರುವ ಬಗ್ಗೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.
ತೋಟಕ್ಕೆ ಹೋಗಿದ್ದ ಧನಂಜಯಪ್ಪ ಸೋಮವಾರ ರಾತ್ರಿ ಸುಮಾರು 10-00 ಗಂಟೆಗೆಯಾದರೂ ಮನೆಗೆ ಬಾರದೇ ಇದ್ದುದ್ದರಿಂದ ರಾತ್ರಿ ಸುಮಾರು 10-30 ಗಂಟೆಗೆ ಕುಟುಂಬಸ್ಥರು ಜಮೀನಿನ ಅಡಿಕೆ ತೋಟದ ಹತ್ತಿರ ಹೋದಾಗ ಮಾವಿನ ಮರದ ರೆಂಬೆಗೆ ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣುಹಾಕಿಕೊಂಡಿದ್ದು ತಿಳಿದಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.